23.2 C
ಪುತ್ತೂರು, ಬೆಳ್ತಂಗಡಿ
April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಚಾರ್ಮಾಡಿ ಘಾಟಿಯಲ್ಲಿ ಪದೇ ಪದೇ ಸಂಭವಿಸುತ್ತಿರುವ ಕಾಳ್ಗಿಚ್ಚು ತಡೆಯಲು ಕೊನೆಗೂ ಅರಣ್ಯ ಇಲಾಖೆಯಿಂದ ಸಿಬ್ಬಂದಿ ನಿಯೋಜನೆ

ಚಾರ್ಮಾಡಿ ಘಾಟಿಯಲ್ಲಿ ಪದೇ ಪದೇ ಸಂಭವಿಸುತ್ತಿರುವ ಕಾಳ್ಗಿಚ್ಚು ತಡೆಯಲು ಅರಣ್ಯ ಇಲಾಖೆಯು ಕೊನೆಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಿದೆ.

ಕೊಟ್ಟಿಗೆಹಾರ ಅರಣ್ಯ ಇಲಾಖೆಯಲ್ಲಿ ಬೆಂಕಿ ವೀಕ್ಷಕರು ಇದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಬದಿ ಕಿಡಿಗೇಡುಗಳು ಹಚ್ಚುವ ಬೆಂಕಿಯಿಂದ ಉಂಟಾಗುತ್ತಿರುವ ಕಾಳ್ಗಿಚ್ಚು ತಡೆಯಲು ಸಾಧ್ಯವಾಗುತ್ತಿಲ್ಲ.

ಬಿದರತಳ ಬಳಿ ಅರಣ್ಯದಲ್ಲಿ ಬೆಂಕಿ ಹರಡಿತ್ತು. ಅದಾದ ಒಂದೇ ವಾರದ ನಂತರ ಘಾಟಿಯಲ್ಲಿ ಅಣ್ಣಪ್ಪಸ್ವಾಮಿ ದೇಗುಲದ ಸಮೀಪ ಮತ್ತೆ ಕಾಳ್ಗಿಚ್ಚು ಕಾಣಿಸಿಕೊಂಡು ನೂರಾರು ಎಕರೆ ಹುಲ್ಲುಗಾವಲು ಅಗ್ನಿಗೆ ಆಹುತಿಯಾಯಿತು.

ಇದನ್ನು ತಪ್ಪಿಸಲು ಈಗ ಅರಣ್ಯ ಇಲಾಖೆಯಿಂದ ಆನೆ ಕಾರ್ಯಪಡೆ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಿದೆ. ರಸ್ತೆ ಬದಿಯಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚುವುದನ್ನು ತಡೆಯಲು, ರಸ್ತೆಯಲ್ಲಿ ವಾಹನ ನಿಲ್ಲಿಸಿದವರ ಮೇಲೆ ನಿಗಾ ಇಡುವ ಕೆಲಸವನ್ನು ಈ ಸಿಬ್ಬಂದಿ ಮಾಡಲಿದ್ದಾರೆ.

Related posts

ಬಳಂಜ ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಪದ ಪ್ರದಾನ ಸಮಾರಂಭ

Suddi Udaya

ಮರೋಡಿ: ದೇರಾಜೆ ಬೆಟ್ಟ ಎಂಬಲ್ಲಿಗೆ ಹೋಗುವ ಸಂಪರ್ಕ ರಸ್ತೆ ಕುಸಿತ

Suddi Udaya

ಸೋಲಾರ್ ಟಾರ್ಪಾಲಿನ್ ಶೀಟ್ ಖರೀದಿಗೆ ಸಹಾಯಧನ: ಅರ್ಜಿ ಆಹ್ವಾನ

Suddi Udaya

ಕಾಜೂರು: ಬೈಕ್ ಗೆ ಸ್ಕೂಟರ್ ಡಿಕ್ಕಿ: ಸವಾರನಿಗೆ ಗಾಯ

Suddi Udaya

ಜೆಸಿಐ ಭಾರತದ ವಲಯ 15ರ ರಾಷ್ಟ್ರೀಯ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರಾಗಿ ಜೇಸಿ ಹೆಚ್.ಜಿ.ಎಫ್ ಅಶೋಕ್ ಗುಂಡಿಯಲ್ಕೆ ಆಯ್ಕೆ

Suddi Udaya

ಚಿಬಿದ್ರೆ : ಪೆರಿಯಡ್ಕ ನಿವಾಸಿ ನಾಟಿ ವೈದ್ಯ ರಾಮಣ್ಣ ಗೌಡ ನಿಧನ

Suddi Udaya
error: Content is protected !!