April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು: ಶಿಕ್ಷಣ ಮಾರ್ಗದರ್ಶನ – ಡಾ. ಆಳ್ವರಿಗೆ ನಾಗರೀಕ‌ ಸನ್ಮಾನ

ವೇಣೂರು: ಎಸ್.ಎಸ್.ಎಲ್.ಸಿ ಎಂಬುದು ಶಿಕ್ಷಣದ ಪ್ರಮುಖ. ಹಂತ. ಪಿ.ಯು.ಸಿ ಶಿಕ್ಷಣದ ಹಂತದಲ್ಲಿ ಬರುವ ಬಹು ಬಗೆಯ ಸ್ಪರ್ಧಾತ್ಮಕ. ಪರೀಕ್ಷೆಗಳ. ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಸರಿಯಾದ ಮಾಹಿತಿ ಅಗತ್ಯ. ಪಿಯುಸಿಯನ್ನು ಪೂರೈಸುವುದಷ್ಟೆ ಧ್ಯೇಯವಲ್ಲ. ಸ್ಪರ್ಧಾತ್ಮಕ‌ ಪರೀಕ್ಷೆಗಳನ್ಬು ಸಮರ್ಥವಾಗಿ ಎದರಿಸಿ ಭವಿಷ್ಯ ರೂಪಿಸುವಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೋಲಬಾರದು. ಸಕಾಲದಲ್ಲಿ ಮಾಡುವ ಸರಿಯಾದ ನಿರ್ಧಾರದಲ್ಲಿ ನಮ್ಮ ಯಶಸ್ಸು ನಿಂತಿದೆ ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಡಾ.ಎಂ.ಮೋಹನ. ಆಳ್ವ ನುಡಿದರು.

ಅವರು ವೇಣೂರಿನ ಬಾಹುಬಲಿ ಸಮುದಾಯ ಭವನದಲ್ಲಿ ನಡೆದ ಪರೀಕ್ಷೆ ಶಿಕ್ಷಣ ಮಾರ್ಗದರ್ಶನದಲ್ಲಿ ಮಾತಾಡುತ್ತಿದ್ದರು. ವಿದ್ಯಾರ್ಥಿಗಳ. ದೈಹಿಕ ಮತ್ತು ಮಾನಸಿಕ ಕ್ಷಮತೆಯೂ ಬಹುಮುಖ್ಯ ಅಂಶ ಕಲೆ , ವಾಣಿಜ್ಯ ಮತ್ತು ವಿಜ್ಞಾನ ಎಂಬ ಮೂರು ಪ್ರಮುಖ ಧಾರೆಗಳಲ್ಲಿ ಗುರುತಿಸುವ ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಬುದ್ದಿಮತ್ತೆ ಮತ್ತು ಆಸಕ್ತಿಯನುಸಾರ ವಿಪುಲ ಅವಕಾಶಗಳ ಹೆಬ್ಬಾಗಿಲು” ಎಂದರು.

ವೇದಿಕೆಯಲ್ಲಿ ಗಣ್ಯರಾದ ಶಿವರಾಮ ಹೆಗ್ಡೆ, ಭಾಸ್ಕರ ಪೈ, ಜಗದೀಶ ನಾಯಕ್, ಜಯರಾಮ ಶೆಟ್ಟಿ, ಹರೀಶ್ ಕುಮಾರ್, ಜಗದೀಶ್ಚಂದ್ರ.ಡಿಕೆ, ಎಲ್.ಜೆ ಪೆರ್ನಾಂಡೀಸ್, ಡಾ.ಸಂತೋಷ್ ರೇಗೊ, ಡಾ. ಜಗದೀಶ್ ಚೌಟ, ಡಾ. ಶಾಂತಿ ಪ್ರಸಾದ್ ಹೆಗ್ಡೆ,ಸುಂದರ ಹೆಗ್ಡೆ, ಎಚ್ ಮಹಮ್ಮದ್, ಮಲ್ಲಿಕಾ ಕಾಶಿನಾಥ್ ಹೆಗ್ಡೆ,ಸುಭಾಷಿನಿ , ವಿಜಯ ಗೌಡ ಉಪಸ್ಥಿತರಿದ್ದರು.

ಡಾ.ಮೋಹನ ಆಳ್ವ ಅವರನ್ನು‌‌ ನಾಗರೀಕರ ಪರವಾಗಿ ಸನ್ಮಾನಿಸಲಾಯಿತು.

ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಗುಣಪ್ರಸಾದ್ ಕಾರಂದೂರು ವಂದಿಸಿದರು. ಆಳ್ವಾಸ್ ಕಾಲೇಜಿನ. ಕನ್ನಡ ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.

Related posts

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದಿಂದ ಕೆಂಪೇಗೌಡ ಜಯಂತಿ ಆಚರಣೆ ಹಾಗೂ ಬೃಹತ್‌ ರಕ್ತದಾನ ಶಿಬಿರ

Suddi Udaya

ಟುನಿಷಿಯ ಅಂತರಾಷ್ಟ್ರೀಯ ವಿಜ್ಞಾನ ಮೇಳ: ಆಪ್ತಚಂದ್ರಮತಿ ಮುಳಿಯರವರಿಗೆ ಗ್ಯಾಂಡ್ ಗೋಲ್ಡ್ ಮೆಡಲ್

Suddi Udaya

ನಾಳ ಗಂಪದಕೋಡಿ ನಿವಾಸಿ ಶ್ರೀಮತಿ ನಾಗರತ್ನಮ್ಮ ನಿಧನ

Suddi Udaya

ಲೋಕಸಭಾ ಚುನಾವಣೆ ಹಿನ್ನಲೆ: ಬೆಳ್ತಂಗಡಿಯ ಪಿಎಸ್ಐ ಓಡಿಯಪ್ಪ ಗೌಡ ಹಾಗೂ ಪುಂಜಾಲಕಟ್ಟೆಯ ಪಿಎಸ್ಐ ನಂದ ಕುಮಾರ್ ವರ್ಗಾವಣೆ

Suddi Udaya

ಮಾಯಿಲ ಕೋಟೆ ಸೀಮೆ ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ ಹಾಗೂ ಕಲ್ಲುರ್ಟಿ ಅಗೇಲು ಸೇವೆ

Suddi Udaya

ಗುರುವಾಯನಕೆರೆ: ಏಕದಿನ ಶೈಕ್ಷಣಿಕ ಸಮ್ಮೇಳನ ಸಮಾರೋಪ: ಪಠ್ಯಪುಸ್ತಕ ರಚನೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು: ಎಮ್.ಎಲ್.ಸಿ ಭೋಜೇ ಗೌಡ

Suddi Udaya
error: Content is protected !!