September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಜಿರೆ ಘಟಕದಿಂದ ಸಾರಿಗೆ ಇಲಾಖೆಯ ನಿರ್ಲಕ್ಷತೆಯಿ೦ದ ನಡೆದ ಬಸ್‌ ಅಪಘಾತ ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ಸಿನ ಸಮಸ್ಯೆಯ ವಿರುದ್ಧ ರಸ್ತೆ ತಡೆ ಮಾಡಿ ಪ್ರತಿಭಟನೆ

ಉಜಿರೆ : ಸಾರಿಗೆ ಇಲಾಖೆಯ ನಿರ್ಲಕ್ಷತೆಯಿ೦ದ ನಡೆದ ಬಸ್‌ ಅಪಘಾತ ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಬಸ್ಸಿನ ಸಮಸ್ಯೆಯ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಜಿರೆ ಘಟಕದಿಂದ ಜ. 29ರಂದು ಉಜಿರೆಯ ಸರ್ಕಲ್ ನಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಸಂಚಾಲಕ ಸುವಿತ್ ಶೆಟ್ಟಿ ಮಾತನಾಡಿ, 10-15 ವರ್ಷಗಳ ಹಿಂದಿನ ಬಸ್ ಗಳನ್ನು ಓಡಿಸುವಂತಹ ಕೆಲಸಗಳು ಮಂಗಳೂರು – ಧರ್ಮಸ್ಥಳದ ಡಿಪ್ಪೋಗಳಲ್ಲಿ ಆಗುತ್ತಿದೆ. ಹಾಗಾಗಿ ಇಂತಹ ಅನಾಹುತಗಳು ಪದೇ ಪದೇ ನಡೆಯುತ್ತಿದೆ. ಬಸ್ ನ ಸಂಖ್ಯೆಗಳನ್ನು ಹೆಚ್ಚು ಮಾಡಬೇಕು. ಸೋಮಂತಡ್ಕದಲ್ಲಿ ನಡೆದ ಅನಾಹುತದಲ್ಲಿ ಕೂಡ ಓವರ್ ಲೋಡ್ ಆಗಿತ್ತು. ಸುರಕ್ಷತಾ ಕ್ರಮಗಳನ್ನು ಕೆ.ಎಸ್.ಆರ್.ಟಿ.ಸಿ ತೆಗೆದುಕೊಳ್ಳಬೇಕು. ಒಳ್ಳೆಯ ರೀತಿಯ ವ್ಯವಸ್ಥೆಯುತವಾದಂತಹ ಬಸ್ ಗಳನ್ನು ಹಾಕಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವಿಭಾಗ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಸಂಚಾಲಕ ಪ್ರಾರ್ಥನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಡಿಕೆಶಿ ಮುಖ್ಯಮಂತ್ರಿ, ಇದು ಕಾರ್ಯಕರ್ತರ ಗೆಲುವು: ರಂಜನ್ ಜಿ ಗೌಡ

Suddi Udaya

ಕರಾಯ ವ್ಯಾಪ್ತಿಯಲ್ಲಿ ನಾಳೆ ವಿದ್ಯುತ್ ನಿಲುಗಡೆ

Suddi Udaya

ಬೆಳ್ತಂಗಡಿ: ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರುಗಳ ಆಯ್ಕೆ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದಿಂದ ಉಜಿರೆ ಶ್ರೀ ಧ. ಮ.ಕಾಲೇಜಿನ ಪ್ರಾಂಶುಪಾಲ ಕುಮಾರ್ ಹೆಗ್ಡೆ ಯವರಿಗೆ ಸನ್ಮಾನ

Suddi Udaya

ಕೊಕ್ಕಡ ಕೇಸರಿ ಟೈಗರ್ಸ್ ವತಿಯಿಂದ ಭಜನಾ ಮಂದಿರಕ್ಕೆ ಸಹಾಯಧನ

Suddi Udaya

ಬೆಳ್ತಂಗಡಿ ತಾ.ಪಂ. ನ ಕಾರ್ಯನಿರ್ವಾಹಕಾಧಿಕಾರಿಯಾಗಿ ವೈಜಣ್ಣ ಕರ್ತವ್ಯಕ್ಕೆ ಹಾಜರು

Suddi Udaya
error: Content is protected !!