30.8 C
ಪುತ್ತೂರು, ಬೆಳ್ತಂಗಡಿ
April 13, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಮಹಾಸಭೆ

ಕೊಯ್ಯೂರು: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಮಹಾಸಭೆಯು ಅದೂರುಪೆರಲು ಶ್ರೀ ಪಂಚದುರ್ಗಾ ಸಭಾಭವನದಲ್ಲಿ ಜ. 26 ರಂದು ನಡೆಯಿತು. ವಾಣಿ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಎ. ಧರ್ಣಪ್ಪ ಗೌಡ ಬಾನಡ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು.

ಬೆಂಗಳೂರಿನ ಯುವ ಉದ್ಯಮಿ ಪುಷ್ಪಗಿರಿ ಕಿರಣ್ ಚಂದ್ರ ಮಾತನಾಡಿ ಒಕ್ಕಲಿಗರಾದ ನಾವು ಇಂದು ಯಾವುದರಲ್ಲಿಯೂ ಹಿಂದೆ ಉಳಿದಿಲ್ಲ. ನಮ್ಮ ಸಮುದಾಯದ ಪ್ರತಿಯೊಂದು ಮಗುವು ಉನ್ನತ ಶಿಕ್ಷಣ ಪಡೆದು ದೇಶ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮವರು ಕೃಷಿಯೊಂದಿಗೆ ಇತರ ವ್ಯವಹಾರಗಳನ್ನು ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕೆಂದು ಕರೆ ನೀಡಿದರು. ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಇದರ ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ , ಸಂಘದ ಅಧ್ಯಕ್ಷ ವಿಜಯ ಕುಮಾರ್ ಎಂ. ಕೊಯ್ಯೂರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ನವೀನ್ ಗೌಡ ವಾದ್ಯಕೋಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಯಾಮಣಿ, ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ, ತಾಲೂಕು ಸಂಘದ ನಿರ್ದೇಶಕ ದಿನೇಶ್ ಗೌಡ ದೇಂತ್ಯಾರು ಬೊಟ್ಟು, ಕೊಯ್ಯೂರು ಗ್ರಾಮದ ಮಹಿಳಾ ವೇದಿಕೆ ಅಧ್ಯಕ್ಷೆ ವನಿತಾ ಕಡಮಾಜೆ, ಯುವ ವೇದಿಕೆ ಅಧ್ಯಕ್ಷ ಅಜಿತ್ ಗೌಡ ಬಜಿಲ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್‌ ಗೌಡ ಬಜಿಲ ಉಪಸ್ಥಿತರಿದ್ದರು.

ಸಮಾರಂಭದ ಅತಿಥಿಗಳಾದ ಧರ್ಣಪ್ಪ ಗೌಡ ಬಾನಡ್ಕ, ಕಿರಣ್ ಚಂದ್ರ ಪುಷ್ಪಗಿರಿ, ಚಂದ್ರಕಾಂತ ನಿಡ್ಡಾಜೆ, ಜಯಣ್ಣ ಗೌಡ ಮಿನಂದೇಲು ಇವರುಗಳನ್ನು ಸನ್ಮಾನಿಸಲಾಯಿತು. 2024ನೇ ಸಾಲಿನಲ್ಲಿ 10ನೇ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ 90% ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇತ್ತೀಚೆಗೆ ನಡೆದ ಸಹಕಾರ ಸಂಘದ ಚುನಾವಣೆಯಲ್ಲಿ ಜಯಗಳಿಸಿ ರವೀಂದ್ರನಾಥ ಪೆರ್ಮುದೆ, ದಾಮೋದರ ಗೌಡ ಬೆರ್ಕೆ, ಉಜ್ವಲ್ ಕುಮಾರ್ ಪಾಂಬೇಲು, ಪರಮೇಶ್ವ‌ರ್ ಗೌಡ, ನವೀನ ಕುಮಾರ್ ವಾದ್ಯಕೋಡಿ, ಯತೀಶ್ ಗೌಡ, ಶೋಭಾ ಮೈಂದಕೋಡಿ, ಕುಸುಮಾವತಿ ಕಲ್ಲೇರಿ ಇವರುಗಳನ್ನು ಗೌರವಿಸಲಾಯಿತು.

ದೀಪಿಕಾ, ಭರತ್, ದಿನೇಶ್ ಜಾಲ್ನಪು, ಗೀತಾ ರಾಮಣ್ಣ ಗೌಡ, ಅಭಿನಂದನಾ ಪತ್ರ ಮತ್ತು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಸಭಾ ಕಾರ್ಯಕ್ರಮದ ಮುಂಚಿತವಾಗಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಾದ ಮಾನ್ಯ, ಚೈತನ್ಯ, ಪ್ರೇಕ್ಷರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ರವೀಂದ್ರನಾಥ ಪೆರ್ಮುದೆ ಸ್ವಾಗತಿಸಿ, ಮೋಹನ್ ಗೌಡ ಮತ್ತು ದಿವ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು. ಯಶವಂತ ಗೌಡ ಪೂರ್ಯಳ ವಂದಿಸಿದರು.

Related posts

3ನೇ ಹಂತದ ಪಿಎಂಶ್ರೀ ಯೋಜನೆಗೆ ಬೆಳ್ತಂಗಡಿ ಮಾದರಿ ಹಿ.ಪ್ರಾ. ಶಾಲೆ ಆಯ್ಕೆ

Suddi Udaya

ಮೇಲಂತಬೆಟ್ಟು: ಶಾಂತಿನಗರ ನಿವಾಸಿ ಐಸಾಕ್ ಡಿಸೋಜಾ ನಿಧನ

Suddi Udaya

ಸೆ.6: ರೆಖ್ಯದಲ್ಲಿ 24ನೇ ವರ್ಷದ ಮೊಸರು ಕುಡಿಕೆ ಉತ್ಸವ

Suddi Udaya

ಕಳೆಂಜ ಗ್ರಾ.ಪಂ. ನ ದ್ವಿತೀಯ ಹಂತದ ಗ್ರಾಮಸಭೆ

Suddi Udaya

ರಾಜ್ಯಮಟ್ಟದ ಯೋಗ ಸ್ಪರ್ಧೆ: ಕಲ್ಮಂಜ ಶಾಲಾ ವಿದ್ಯಾರ್ಥಿ ಮೋಹಿತ್ ಗೌಡ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಧರ್ಮಸ್ಥಳ: ಭಾರಿ ಮಳೆಗೆ ಹೆಚ್ಚಾದ ನೇತ್ರಾವತಿ ನದಿ ನೀರಿನ ರಭಸ

Suddi Udaya
error: Content is protected !!