April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ರುಡ್‌ ಸೆಟ್‌ ಸಂಸ್ಥೆಯಲ್ಲಿ ವಸ್ತ್ರ ವಿನ್ಯಾಸ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ : ನಿಮ್ಮಲ್ಲಿ ಇರುವ ಧೈರ್ಯ, ಚಾಕಕ್ಯತೆ, ಕ್ರಿಯಾಶೀಲತೆ ನೋಡಿ ನೀವು ನಿಜವಾಗಿಯೂ ಯಶಸ್ಸು ಕಾಣುತ್ತೀರಿ ಎಂದು ಭಾವಿಸುತ್ತೇನೆ. ನೀವು ಒಟ್ಟಿಗೆ ಸೇರಿ ಕಲಿಯುವುದರಿಂದ ಇನ್ನೊಬ್ಬರನ್ನು ತುಳಿದು ಬದುಕು ಸಾಮರ್ಥ್ಯ ವ್ಯರ್ಥ. ಆದರೆ ಇನ್ನೊಬ್ಬರನ್ನು ಅರಿತು ಜೊತೆಯಾಗಿ ಬದುಕಿ ಬಾಳುವುದು ಸಾಮರ್ಥ್ಯ ಎಂದು ಕಾಣುತ್ತದೆ. ಬೇರೆ ಬೇರೆ ಊರುಗಳಿಂದ ಬೇರೆ ಬೇರೆ ಹಿನ್ನಲೆಯನ್ನು ಹೊಂದಿರುವ ನೀವು ರುಡ್‌ ಸೆಟ್‌ ಸಂಸ್ಥೆಗೆ ಬಂದು ಒಟ್ಟಾಗಿ ಒಂದೇ ಮನೆಯವರಾಗಿ ಕಲಿತ್ತಿದ್ದೀರಿ ತುಂಬಾ ಸಂತೋಷ. ಇದನ್ನು ಮುಂದುವರೆಸಿ. ಈ ಸಂಸ್ಥೆಯಲ್ಲಿ ವೃತ್ತಿ ಕೌಶಲ್ಯದ ಜೊತೆಗೆ ಜೀವನ ಕೌಶಲ್ಯವನ್ನು ಕಲಿಸಿ, ಇದನ್ನು ಅಳಡಿಸಿಕೊಂಡು ನಡೆಯಿರಿ. ನಮ್ಮ ಯೋಚನೆಗಳು ಚೆನ್ನಾಗಿ ಇದ್ದಲ್ಲಿ ಯೋಜನೆ ಚೆನ್ನಾಗಿ ಆಗುತ್ತದೆ. ಸಮಸ್ಯೆ ಎಲ್ಲರಲ್ಲೂ ಇದ್ದೆ ಇರುತ್ತದೆ. ಅದನ್ನು ಎದುರಿಸಿ ನಾವು ಬದುಕುವುದನ್ನು ಕಲಿಯಬೇಕು.ವೃತ್ತಿ ಜೀವನದ ಜೊತೆಗೆ ಸಂಸಾರಕ್ಕೂ ಒಂದಷ್ಟು ಸಮಯ ಕೊಡಬೇಕು ಎಂದು ನೆನಪಿರಲಿ. ವಸ್ತ್ರ ವಿನ್ಯಾಸಕ್ಕೆ ಯಾವತ್ತೂ ಬೇಡಿಕೆ ಇಲ್ಲಂತ ಆಗುವುದಿಲ್ಲ. ಪ್ರತಿಯೋಬ್ಬರು ಹೊಸ ವಿನ್ಯಾಸಗಳನ್ನು ಕೇಳುತ್ತಾರೆ. ನೀವು ಎಷ್ಟು ಹೊಸತನ ಕಲಿಯುತ್ತೀರಿ ಅಷ್ಟು ಕೆಲಸ ನಿಮಗೆ ಸಿಗುತ್ತದೆ. ನೀವು ಕಂಡ ಕನಸ ಅನ್ನು ನನಸು ಮಾಡಿಕೊಳ್ಳಿ ಶುಭವಾಗಲಿ ಎಂದು ಧರ್ಮಸ್ಥಳದ ಎಸ್. ಡಿ. ಎಂ. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪರಿಮಳ ಅಭಿಪ್ರಾಯಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ವಸ್ತ್ರ ವಿನ್ಯಾಸ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು. ಪಡೆದ ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ.ವಿಜಯ ಕುಮಾರ್ ವಹಿಸಿ, ಮಾತನಾಡಿದರು. ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು. ಸುಮಾರು 33 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು. ಶ್ರೀಮತಿ ದೀಪ್ತಿ, ಕುಮಾರಿ ಪೂರ್ಣಿಮಾ ಮತ್ತು ಕುಮಾರಿ ಸ್ವಾತಿ, ಕುಮಾರಿ ಲಾವಣ್ಯ ಪ್ರಾರ್ಥನೆ ಮಾಡಿದರು. ಶ್ರೀಮತಿ ಮೋನಿಕಾ, ಕುಮಾರಿ ಪೂಣ್ಯಶ್ರೀ , ಶ್ರೀಮತಿ ಯಾಮಿನಿ ತರಬೇತಿಯ ಅನುಭವ ಹಂಚಿಕೊಂಡರು.

Related posts

ಹೃದಯಾಘಾತಕ್ಕೊಳಗಾದ ವ್ಯಕ್ತಿಯೊರ್ವರಿಗೆ ಸಕಾಲದಲ್ಲಿ ಚಿಕಿತ್ಸೆ ಒದಗಿಸಿ ಅಪಾಯದಿಂದ ಪಾರು ಮಾಡಿದ ಆಸ್ಪತ್ರೆಯ ಸಿಬ್ಬಂದಿ: ಮದ್ದಡ್ಕ ನಿವಾಸಿ ಪ್ರದೀಪ್ ನಾಯಕ್ ರವರ ಕಾರ್ಯಕ್ಕೆ ವ್ಯಾಪಕ ಪ್ರಸಂಸೆ

Suddi Udaya

ಶಿಶಿಲ:ಕಂದಾಯ ಇಲಾಖೆಯಿಂದ ಭೂ ಪರಿವರ್ತನೆ ವಿಳಂಬ ಆಗುತ್ತಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ಮನವಿ

Suddi Udaya

ಬೆಳ್ತಂಗಡಿ ಗ್ರಂಥಾಲಯ ಮೇಲ್ವಿಚಾರಕರಿಗೆ ಡಿಜಿಟಲ್ ಕೌಶಲ್ಯ, ನಾಯಕತ್ವ ಮತ್ತು ಸಹಭಾಗಿತ್ವ ಚಟುವಟಿಕೆಯ ತರಬೇತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ವಲಯ ಆಯೋಜಿಸಿದ ಮಕ್ಕಳ ದಿನಾಚರಣೆ ಪ್ರಯುಕ್ತ ಮುದ್ದು ಕಂದ ಫೋಟೋ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ

Suddi Udaya

ಗಣೇಶ ಚತುರ್ಥಿಯ ರಜೆಯನ್ನು ಬದಲಾಯಿಸುವಂತೆ ಮನವಿ

Suddi Udaya

ಬೆಳ್ತಂಗಡಿ: ಅಚ್ಚಿನಡ್ಕದಲ್ಲಿ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

Suddi Udaya
error: Content is protected !!