ವೇಣೂರು: ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ನವಗುಳಿಗ ಕ್ಷೇತ್ರದಲ್ಲಿ 10ನೇ ವರ್ಷದ ಜಾತ್ರಾ ಮಹೋತ್ಸವವು ಫೆ.4 ಮತ್ತು 5 ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ರಮೇಶ್ ತಿಳಿಸಿದ್ದಾರೆ.

ಫೆ.4 ರಂದು ರಾತ್ರಿ ವಾಸ್ತುಪೂಜೆ, ವಾಸ್ತು ಹೋಮ, ದಿಕ್ ಬಲಿ ಹಾಗೂ 10ನೇ ವರ್ಷದ ಜಾತ್ರಾ ಮಹೋತ್ಸವ ಮತ್ತು ಮಹಾಚಂಡಿಕಾಯಾಗ ನಡೆಯಲಿದೆ.
ಫೆ.5 ರಂದು ಬೆಳಿಗ್ಗೆ ನಾಗಬನದಲ್ಲಿ ಶ್ರೀ ನಾಗದೇವರಿಗೆ ತಂಬಿಲ. ಶ್ರೀ ದುರ್ಗಾದೇವಿ ಗುಡಿಯಲ್ಲಿ ಚಂಡಿಕಾಯಾಗ, ಪಂಚಾಮೃತ ಅಭಿಷೇಕ, ಪಂಚವಿಂಶತಿ ಕಲಶ, ಪಲ್ಲಪೂಜೆ, ಆದಿವಾಸ ಹೋಮ. ಭಜನಾ ಕಾರ್ಯಕ್ರಮ ವಿಶೇಷ ರಂಗಪೂಜೆ ಮತ್ತು ಮಹಾಪೂಜೆ ಹಾಗೂ ಪ್ರಸಾದ ವಿತರಣೆ, ಮಧ್ಯಾಹ್ನ ‘ಅನ್ನಸಂತರ್ಪಣೆ’ ಜರುಗಲಿದೆ. ಸಂಜೆ ನವ(9) ಗುಳಿಗಳ ವಿಶೇಷ ಗಗ್ಗರ ಸೇವೆ ನಡೆಯಲಿದೆ. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ನಂತರ ಮೈಸಂದಾಯ, ದುಗಲಾಯ, ಪಂಜುರ್ಲಿ, ಮಂತ್ರದೇವತೆ, ಮೈಯಂತಿ, ಮಂತ್ರದೇವತೆ, ಸನ್ಯಾಸಿ ಗುಳಿಗ, ಕೊರಗಜ್ಜ ದೈವಗಳ ಗಗ್ಗರಸೇವೆ ನಡೆಯಲಿದೆ.ಫೆ.6 ರಂದು ಪರಿವಾರ ದೈವಗಳ ಪರ್ವಸೇವೆ ನಡೆಯಲಿದೆ ಎಂದು ತಿಳಿಸಿದರು.
ನವಗುಳಿಗಗಳ ಗಗ್ಗರ ಸೇವೆ ಇಲ್ಲಿನ ವಿಶೇಷ: ಧರ್ಮದರ್ಶಿ ರಮೇಶ್ ಬರ್ಕಜೆ
ಶ್ರೀ ದುರ್ಗಾಪರಮೇಶ್ವರಿ ನವಗುಳಿಗ ಕ್ಷೇತ್ರದಲ್ಲಿ 10ನೇ ವರ್ಷದ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದ್ದು, ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ವಿಶೇಷವಾಗಿ ನವ(9) ಗುಳಿಗ ದೈವಗಳ ಗಗ್ಗರ ಸೇವೆ ಹಾಗೂ ಪರಿವಾರ ದೈವಗಳ ಗಗ್ಗರ ಸೇವೆ ನಡೆಯಲಿದೆ. ಕ್ಷೇತ್ರದಲ್ಲಿ ಭಕ್ತರಿಗೆ ಎರಡು ದಿನವು ಅನ್ನಸಂತರ್ಪಣೆ ಸೇವೆ ನಡೆಯಲಿದೆ. ಶ್ರೀ ಗಾನಸುರಭಿ ಭಜನಾ ಸಂಕೀರ್ತನಾ ತಂಡ ಉಜಿರೆ ಮತ್ತು ಸಂದೇಶ್ ಮದ್ದಡ್ಕ ಇವರ ವಿದ್ಯಾರ್ಥಿಗಳಿಂದ ಕುಣಿತ ಭಜನಾ ಕಮ್ಮಟೋತ್ಸವ ಜರುಗಲಿದೆ. ಜಾತ್ರೋತ್ಸವದ ಅಂಗವಾಗಿ ಉಭಯ ಜಿಲ್ಲಾ ಹಗ್ಗಜಗ್ಗಾಟ ಪಂದ್ಯಾವಳಿಯನ್ನು ಆಯೋಜಿಸಿದ್ದೇವೆ. ಊರ ,ಪರವೂರ ಸರ್ವರೂ ಕೂಡ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಕ್ಷೇತ್ರದ ಧರ್ಮದರ್ಶಿ ರಮೇಶ್ ಬರ್ಕಜೆ ತಿಳಿಸಿದರು.