April 21, 2025
Uncategorized

ಬೆಳ್ತಂಗಡಿ : ತಡೆಗೋಡೆ ರಚನೆ ಕಾಮಗಾರಿಗೆ ರೂ.2 ಕೋಟಿ 10 ಲಕ್ಷ ಅನುದಾನ ಮಂಜೂರು: ರಕ್ಷಿತ್ ಶಿವರಾಂ

ಬೆಳ್ತಂಗಡಿ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಳೆಬದಿಯಲ್ಲಿ ಕೃಷಿ ಜಮೀನುಗಳ ಸಂರಕ್ಷಣೆಗೆ ಮತ್ತು ದೇವಸ್ಥಾನದ ಬಳಿ ತಡೆಗೋಡೆ ರಚನೆ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆಯಿಂದ ನನ್ನ ಮನವಿ ಮೇರೆಗೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರ ಶಿಫಾರಸ್ಸಿನ ಮೇರೆಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ರವರು ತಾಲೂಕಿನ ವಿವಿಧ ಕಾಮಗಾರಿಗಳಿಗೆ ಎರಡು ಕೋಟಿ ಹತ್ತು ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ ಎಂದು ರಕ್ಷಿತ್ ಶಿವರಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮಗಾರಿಯ ವಿವರಗಳು :
ತಾಲೂಕಿನ ಬಡಗಕಾರಂದೂರು ಗ್ರಾಮದ ಬೈಲ ಕೊಡಂಗೆ ಬಳಿ ತಡೆಗೋಡೆ ರಚನೆ ಕಾಮಗಾರಿಗೆ 30 ಲಕ್ಷ, ಕುಧ್ಯಾಡಿ ಗ್ರಾಮದ ಪದ್ಮಾಂಜಲಿ ಬಳಿ ತಡೆಗೋಡೆ ರಚನೆ 25 ಲಕ್ಷ , ಪುತ್ತಿಲ ಗ್ರಾಮದ ಗುತ್ತು ಮನೆಯ ಬಳಿ ತಡೆಗೋಡೆ ರಚನೆ 25 ಲಕ್ಷ , ಪುತ್ತಿಲ ಗ್ರಾಮದ ರವಿಪ್ರಭಾ ಮನೆಯ ಬಳಿ ತಡೆಗೋಡೆ ರಚನೆ ಕಾಮಗಾರಿ 25 ಲಕ್ಷ , ನಾರಾವಿ ಗ್ರಾಮದ ಸೂರ್ಯನಾರಾಯಣ ದೇವಸ್ಥಾನದ ಬಳಿ ತಡೆಗೋಡೆ ರಚನೆ 75 ಲಕ್ಷ , ನಡ ಪಂಚಾಯತ್ ವ್ಯಾಪ್ತಿಯ ಕನ್ಯಾಡಿ ಗ್ರಾಮದ ಮೂಡಬೆಟ್ಟು ಬಾಯ್ತರು ಬಳಿ ತಡೆಗೋಡೆ ರಚನೆ 30 ಲಕ್ಷ .

Related posts

ಬೆಳ್ತಂಗಡಿ ಪಟ್ಟಣ ಪಂಚಾಯತ್ ಸದಸ್ಯರುಗಳಿಗೆ ಒಣ ಕಸ ವಿಲೇವಾರಿ ಬಗ್ಗೆ ವಿಶೇಷ ಅಧ್ಯಯನ ಪ್ರವಾಸ

Suddi Udaya

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಗೆಲುವು: ಬೈಕ್ ಜಾಥದ ಮುಖೇನಾ ಗೆಲುವನ್ನು ಸಂಭ್ರಮಿಸಿದ ನಾಲ್ಕೂರಿನ ಕಾರ್ಯಕರ್ತರು

Suddi Udaya

ಕಲ್ಮಂಜ: ನಿಡಿಗಲ್ ನಿವಾಸಿ ಗೋಪಾಲ ಮಡಿವಾಳ ಹೃದಯಾಘಾತದಿಂದ ನಿಧನ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಪ್ರೋತ್ಸಾಹಕ ಪ್ರಶಸ್ತಿಯ ಗೌರವ

Suddi Udaya

ತೆಂಕಕಾರಂದೂರು ಆಲಡ್ಕ ಬಿಕ್ಕಿರ ನಿವಾಸಿ ದೇವದಾಸ ನಿಧನ

Suddi Udaya

ಕಣಿಯೂರು ದೀಪಾ ಸಂಜೀವಿನಿ ಗ್ರಾಮ ಪಂಚಾಯಿತ್ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya
error: Content is protected !!