April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಇಂದಬೆಟ್ಟು ಗ್ರಾ.ಪಂ. ನಲ್ಲಿ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ

ಇಂದಬೆಟ್ಟು : ಇಂದಬೆಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ 2024-2025 ನೇ ಸಾಲಿನ ವಿಕಲಚೇತನರ ವಿಶೇಷ ಸಮನ್ವಯ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾಲತಾ ರವರ ಅಧ್ಯಕ್ಷತೆಯಲ್ಲಿ ಜ.30 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸೇವಾ ಭಾರತಿ ಕನ್ಯಾಡಿ ಇದರ ಸಂಸ್ಥಾಪಕ ವಿನಾಯಕ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾರ್ಗದರ್ಶಿ ಅಧಿಕಾರಿಯಾಗಿ ಈರಣ್ಣ ಎಸ್.ಎಚ್, ಕುಮಾರಿ ಫೌಝಿಯಾ ನಗರ ವಿಕಲಚೇತನರ ಸಂಯೋಜಕರು, ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಅನಂದ ಅಡಿಲು, ಸದಸ್ಯರಾದ ಶ್ರೀಕಾಂತ್ ಎಸ್ ಇಂದಬೆಟ್ಟು, ವೀರಪ್ಪ ಮೊಯ್ಲಿ, ಶ್ರೀಮತಿ ಹರಿಣಾಕ್ಷಿ, ಬೆಳ್ತಂಗಡಿ ಆರಕ್ಷಕ ಠಾಣೆಯ ಪೊಲೀಸ್ ನಿರೀಕ್ಷಕ ಬಿ.ಜಿ ಸುಬ್ಭಾಪೂರ ಮಠ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ವಿಕಲಚೇತನರ 5% ಅನುದಾನದಲ್ಲಿ 5 ಜನರಿಗೆ ಸಹಾಯಧನ, 3 ಜನರಿಗೆ ವಾಟರ್ ಬೆಡ್, ಒಬ್ಬ ವಿಶೇಷಚೇತನರಿಗೆ ಸರ್ಕಾರದ 50 ಸಾವಿರದ ಸಹಾಯಧನದ ಆದೇಶ ಪ್ರತಿ ವಿತರಿಸಲಾಯಿತು.

ಪಂಚಾಯತ್ ಕಾರ್ಯದರ್ಶಿ ಗಿರಿಯಪ್ಪ ಗೌಡ ಸ್ವಾಗತಿಸಿದರು, ಇಂದಬೆಟ್ಟು ವಿಕಲಚೇತನರ ಸಂಯೋಜಕರಾದ ಎಮ್ ಜೆ ಜೋಸೆಫ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts

ಡಿಪ್ಲೋಮಾ ಕೋರ್ಸ್ ಗೆ ವಿವಿಧ ಸಂಸ್ಥೆಗಳಿಂದ ಅರ್ಜಿ ಆಹ್ವಾನ

Suddi Udaya

ಶ್ರೀ ಕ್ಷೇ. ಧ. ಗ್ರಾ. ಯೋ. ವತಿಯಿಂದ ಮುಂಗಾರು ಯಾಂತ್ರಿಕ್ರತ ಭತ್ತ ಬೇಸಾಯ ಕ್ಕೆ ಚಾಲನೆ

Suddi Udaya

ಗುರುವಾಯನಕೆರೆ ಮಸ್ಜಿದ್ ನಲ್ಲಿ ಉರೂಸ್ ಪ್ರಯುಕ್ತ 11 ಜೋಡಿ ಸಾಮೂಹಿಕ ವಿವಾಹ

Suddi Udaya

ಪುಂಜಾಲಕಟ್ಟೆ  ಕರ್ನಾಟಕ ಪಬ್ಲಿಕ್ ಶಾಲೆ : ಶಾಲಾ ಪ್ರಾರಂಭೋತ್ಸವ

Suddi Udaya

ಮಾಚಾರಿನಲ್ಲಿ ಮಹಿಳೆಯೋರ್ವರ ಶವ ಬಾವಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ: ಸ್ಥಳಕ್ಕೆ ಪೊಲೀಸರ‌ ಆಗಮನ ಮುಂದುವರಿದ ತನಿಖೆ

Suddi Udaya

ನಾರಾವಿ ಸಂತ ಅಂತೋನಿ ಶಿಕ್ಷಣ ಸಂಸ್ಥೆಯಿಂದ ‘ಮಕ್ಕಳ ದಿನ -ಕ್ರೀಡಾಸಂಗಮ 2024’ ಆಚರಣೆ

Suddi Udaya
error: Content is protected !!