February 25, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸಂತ ತೆರೇಸಾ ಶಿಕ್ಷಣ ಸಂಸ್ಥೆಗಳಲ್ಲಿ ಅಗ್ನಿಶಾಮಕ ದಳ ಹಾಗೂ ವರ್ತಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಪ್ರಕೃತಿ ವಿಕೋಪಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಾತ್ಯಕ್ಷಿಕೆ

ಬೆಳ್ತಂಗಡಿ: ಸಂತ ತೆರೇಸಾ ಶಿಕ್ಷಣ ಸಂಸ್ಥೆಗಳಲ್ಲಿ ಅಗ್ನಿಶಾಮಕ ದಳ ಹಾಗೂ ವರ್ತಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಪ್ರಾತ್ಯಕ್ಷಿಕೆ ವರ್ತಕರ ಸಂಘ ಬೆಳ್ತಂಗಡಿ ಇವರ ಮುಂದಾಳತ್ವದಲ್ಲಿ ಅಗ್ನಿ ಶಾಮಕದಳ ಸಿಬ್ಬಂದಿಯ ಸಹಯೋಗದಲ್ಲಿ ಸಂತ ತೆರೇಸಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಪ್ರಕೃತಿ ವಿಕೋಪಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡ್ ಲೋಬೊ, ಉಪಾಧ್ಯಕ್ಷ ಶಶಿಧರ ಪೈ, ಕಾರ್ಯದರ್ಶಿ ಲ್ಯಾನ್ಸಿ ಪಿರೇರಾ ಜೊತೆ ಕಾರ್ಯದರ್ಶಿ ಯಶವಂತ ಪಟ್ಟರ್ಧನ್, ಕೋರ್ ಸಮಿತಿ ಸದಸ್ಯರು ವಿನ್ಸೆಂಟ್ ಡಿಸೋಜ, ಖಜಾಂಚಿ ಸುನಿಲ್ ಪೈ, ಹಾಗೂ ಸದಸ್ಯರು ಶೀತಲ್ ಜೈನ್, ವಿಲ್ಸನ್ ಗೊನ್ಸಾಲ್ವಿಸ್‌ರವರು ಉಪಸ್ಥಿತರಿದ್ದು, ಅಧ್ಯಕ್ಷರು ಅಗ್ನಿಶಾಮಕ ದಳದವರ 24×7 ತೆರೆಮರೆಯ ಜೀವ ಉಳಿಸುವ ಸೇವೆಯನ್ನು ಶ್ಲಾಘಿಸಿದರು.

ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ನೀಲಯ್ಯ ಗೌಡ, ಸಿಬ್ಬಂದಿ ವರ್ಗದವರಾದ ಉಸ್ಮಾನ್, ಲೋಕೇಶ್, ರತನ್ ಕುಮಾರ್, ಶೈಲಾ, ಆದಿಲ್ ಪ್ರಾತ್ಯಕ್ಷಕೆಯಲ್ಲಿ ಭಾಗಿಯಾಗಿದ್ದರು. ಉಸ್ಮಾನ್ ರವರು ವಿವರಾತ್ಮವಾಗಿ ಸ್ಥಳೀಯ ಅನಾಹುತಗಳಾದ ಬಜ್ಜೆ ವಿಮಾನ ದುರಂತ, ವೇಣೂರು ನೀರಿನಲ್ಲಿ ಮುಳುಗಿ ಸಾವು, ಗ್ಯಾಸ್ ದುರಂತಗಳ ಬಗ್ಗೆ ಕಾರಣ ತಿಳಿಸಿ ಹೇಗೆ ಜೀವ ಉಳಿಸಬಹುದಿತ್ತು ಎಂದು ತಿಳಿಸಿದರು. Fire is the best friend Bad Master ಎಂದು ತಿಳಿಸುವ ಮೂಲಕ ಗ್ಯಾಸ್ ಗೀಝರ್ ದುರಂತದ ಬಗ್ಗೆ ಮುಂಜಾಗ್ರತೆ ನೀಡಿ ನಮ್ಮ ವಿದ್ಯಾರ್ಥಿಗಳಿಗೆ ಮುಂಜಾಗ್ರತ ಕ್ರಮಗಳನ್ನು ಪ್ರಾಯೋಗಿಕವಾಗಿ ನೀಡಲು ಅವಕಾಶ ಕಲ್ಪಿಸಿದರು. ಈ ಇಲಾಖೆಗೆ ಸೇರುವ ಅರ್ಹತೆ ತಿಳಿಸಿ ನಿವೃತ್ತಿಯಾದರೂ ಸೇವಾ ತೃಪ್ತಿ ಇದೆ ಯಾಕೆಂದರೆ ಸೇವಾವಧಿಯಲ್ಲಿ ಜೀವಿಗಳನ್ನು ರಕ್ಷಿಸಿದ ಪುಣ್ಯ ಇದೆ ಎಂಬ ಮಾತು ತಿಳಿಸಿದರು.

filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 49;

ಸಂತ ತೆರೇಸಾ ಪ್ರೌಢಶಾಲೆಯ ಸೌಟ್ಸ್ ಮತ್ತು ಗೈಡ್ಸ್ ದಳದ ಸದಸ್ಯರು ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಲೀನಾ ಡಿಸೋಜ ಸ್ವಾಗತಿಸಿದರು. ಸಂತ ತೆರೇಸಾ ಪದವಿ ಪೂರ್ವ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಗೂ ಸಂತ ತೆರೇಸಾ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಂಡರು. ಶಿಕ್ಷಕಿ ಥಿಯೋಫಿಲಾ ವಂದಿಸಿದರು.

Related posts

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಉಚಿತ ಪುಸ್ತಕ ವಿತರಣೆ

Suddi Udaya

ಯುವ ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ನ ಉಪಾಧ್ಯಕ್ಷರಾಗಿ ಯತೀಶ್ ಯಕ್ಷ ಧರ್ಮಸ್ಥಳ ನೇಮಕ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ

Suddi Udaya

ಜಿಲ್ಲಾ ಮಟ್ಟದ ಐ.ಟಿ.ಐ. ವಿದ್ಯಾರ್ಥಿನಿಯರ ತ್ರೋಬಾಲ್ ಪಂದ್ಯಾಟ: ಉಜಿರೆ ಎಸ್.ಡಿ.ಎಂ ಮಹಿಳಾ ಐಟಿಐ ಪ್ರಥಮ

Suddi Udaya

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಚಂದು ಎಲ್ ರವರ ಆರೋಗ್ಯ ವಿಚಾರಿಸಿದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್

Suddi Udaya

ಉರುವಾಲು : ಬೈತಾರು ಕಾರಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಸಂಭ್ರಮ

Suddi Udaya
error: Content is protected !!