April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಲ್ಮಂಜ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

ಕಲ್ಮಂಜ : ಕಲ್ಮಂಜ ಪ್ರೌಢಶಾಲೆಯ ಹತ್ತನೆಯ ತರಗತಿಯ ಪೋಷಕರ ಸಭೆಯಲ್ಲಿ ವೇಣೂರು ಪ್ರೌಢಶಾಲೆಯ ಕನ್ನಡ ಅಧ್ಯಾಪಕರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ರವೀಂದ್ರರವರು ಮಾತನಾಡುತ್ತಾ “ಆಸಕ್ತಿ ಮತ್ತು ಆತ್ಮವಿಶ್ವಾಸವಿದ್ದರೆ ಜಗತ್ತನ್ನೇ ಗೆಲ್ಲಬಹುದು” ಹಾಗೂ ಹಲವಾರು ಉದಾಹರಣೆಗಳ ಮೂಲಕ ಸಾಧಕರ ಕತೆಗಳನ್ನು ಹೇಳಿ ಆಸಕ್ತಿಯಿಂದ ಹಾಗೂ ಆತ್ಮವಿಶ್ವಾಸದಿಂದ ಪ್ರಯತ್ನಿಸಿ ಮಕ್ಕಳೆˌಖಂಡಿತಾ ನೀವು ಸಾಧಿಸಬಲ್ಲರಿ.ಹಲವಾರು ಕೊರತೆಗಳಿದ್ದರೂ ಲೆಕ್ಕಿಸದೆ ತನ್ನ ಪ್ರಯತ್ನದ ಮೂಲಕ ಸಾಧನೆ ಮಾಡಿದಂತಹ ವ್ಯಕ್ತಿಗಳು ನಮ್ಮ ಕಣ್ಣೆದುರೇ ಇರುವಾಗ ಎಲ್ಲಾ ರೀತೀಯ ಸೌಲಭ್ಯ ಹೊಂದಿರುವ ನೀವು ಯಶಸ್ಸನ್ನು ಪಡೆಯುವುದು ಕಷ್ಟವಲ್ಲ ಆದರೆ ನಿರಂತರ ಪ್ರಯತ್ನ ಅಗತ್ಯ ಎಂದು ಕಿವಿಮಾತು ಹೇಳಿದರು.


ಶಿಕ್ಷಕಿ ಸವಿತಾರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಸಾವಿತ್ರಿ ಸಿ ಡಿ ಸ್ವಾಗತಿಸಿ ಮುಖ್ಯ ಶಿಕ್ಷಕಿ ಪೂರ್ಣಿಮಾರವರು ಪ್ರಸ್ತಾವಿಸಿದರು.

ಈ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಎಸ್ ಡಿ ಎಂ ಸಿ ಕಾರ್ಯಾಧ್ಯಕ್ಷ ಮಂಜುನಾಥ ಶೆಟ್ಟರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಮಾಲಿನಿ ಹೆಗಡೆ ಹೇಮಲತಾ ˌಪ್ರೇಮಲತಾ ಸುಧೀಂದ್ರ ಹಾಗೂ ಪ್ರೇಮಾ ಯಚ್ ವಿ ಸಹಕರಿಸಿದರು

Related posts

ಕಾರುಗಳ ನಡುವೆ ಅಪಘಾತ:

Suddi Udaya

ಹಿರಿಯ ಸಾಹಿತಿ ಎನ್ ಜಿ ಪಟವರ್ಧನ್ ಅವರ ಕೃತಿ ‘ಆಟ’ ಲೋಕಾರ್ಪಣೆ

Suddi Udaya

ಕುತ್ಲೂರು: ಕಾಡಬಾಗಿಲು ನಲ್ಲಿ ಸೇತುವೆ ರಚನೆಗೆ ರೂ. 1.90 ಕೋಟಿ ಅನುದಾನ ಒದಗಿಸಿದ ಶಾಸಕ ಹರೀಶ್ ಪೂಂಜ

Suddi Udaya

ಇಂಡೋ ನೇಪಾಳ ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್ ತ್ರೋಬಾಲ್ ಪಂದ್ಯಾಟ: ಕಣಿಯೂರಿನ ಯೂನಿತ್ ಕೆ. ನಾಯಕತ್ವದ ತಂಡ ಪ್ರಥಮ ಸ್ಥಾನ

Suddi Udaya

ಕುತ್ಲೂರು ಗ್ರಾಮಕ್ಕೆ ಅತ್ಯುತ್ತಮ ಪ್ರವಾಸೋದ್ಯಮ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

Suddi Udaya

ಉಜಿರೆ ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜು ವಾರ್ಷಿಕೋತ್ಸವ ಸಮಾರಂಭ

Suddi Udaya
error: Content is protected !!