September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಿಡ್ಲೆ ಪ್ರೇರಣ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

ನಿಡ್ಲೆ: ನಿಡ್ಲೆ ಪ್ರೇರಣ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ, ಇದರ 2023-2024ನೇ ವಾರ್ಷಿಕ ಮಹಾಸಭೆಯನ್ನು ನಾಗವೇಣಿ ಅಮ್ಮ ಸಭಾಂಗಣ ಬರೆಂಗಾಯದಲ್ಲಿ ಜ.30ರಂದು ನಡೆಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಪ್ರೇಮ ವಹಿಸಿಕೊಂಡಿದ್ದರು. ಕುಮಾರಿ ಹೇಮಲತಾ ಹಾಗೂ ಶ್ರೀಮತಿ ಪ್ರೇಮ ಇವರ ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಲಾಯಿತು. ಒಕ್ಕೂಟದ ಮಾಜಿ ಅಧ್ಯಕ್ಷೆ ಶ್ರೀಮತಿ ಹೇಮಾವತಿ ಪ್ರಾಸ್ತಾವಿಕ ಮಾತುಗಳನ್ನು ಆಡಿ ಸಭೆಗೆ ಶುಭ ಕೋರಿದರು. ಎಂ ಬಿ ಕೆ ಭವಾನಿ ವಾರ್ಷಿಕ ವರದಿಯನ್ನು ಹಾಗೂ ಜಮಾ ಖರ್ಚು ವರದಿಯನ್ನು ಓದಿ ಸಭೆಯಲ್ಲಿ ಮಂಡಿಸಲಾಯಿತು ಹಾಗೂ ಅನುಮೋದನೆಯನ್ನು ಪಡೆಯಲಾಯಿತು. ವಲಯ ಮೇಲ್ವಿಚಾರಕಿ ವೀಣಾಶ್ರೀ ವಾರ್ಷಿಕ ಮಹಾಸಭೆಯ ಉದ್ದೇಶ ಜವಾಬ್ದಾರಿ ಹಾಗೂ ಎನ್.ಆರ್.ಎಲ್.ಎಮ್ ನಿಂದ ಸದಸ್ಯರಿಗೆ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಉತ್ತಮ ಮಾಹಿತಿ ನೀಡಿದರು. ಉತ್ತಮ ಸಂಘ, ಸಿಐಎಫ್ ಪಡೆದು ಸ್ವಉದ್ಯೋಗ ಮಾಡುತ್ತಿರುವ ಸದಸ್ಯೆಗೆ ಉತ್ತಮ ಸಾಧಕಿ. ವಿಕಲ ಚೇತನರ ಸಂಘದ ಸದಸ್ಯ ಉತ್ತಮ ಭಾಗವಹಿಸುವಿಕೆ. ಇವರನ್ನು ಗುರುತಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪದಾಧಿಕಾರಿಗಳ ಆಯ್ಕೆ ಮಾಡಿ ಪದಗ್ರಹಣವನ್ನು ಮಾಡಲಾಯಿತು. ಮಾಜಿ ಸದಸ್ಯರಿಗೆ ಸ್ಮರಣಿಕೆ ನೀಡಲಾಯಿತು. ಶ್ರೀಮತಿ ಹೇಮಾವತಿ ನಿರೂಪಿಸಿ, ಕೃಷಿ ಸಖಿ ಸುಮನ ಸ್ವಾಗತಿಸಿ, ಸುಜಾತಾ ಧನ್ಯವಾದವಿತ್ತರು.

Related posts

ಪದ್ಮುಂಜ ಸ.ಹಿ.ಪ್ರಾ. ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಪುರುಷೋತ್ತಮ ಗೌಡ ಮುಗೆರೋಡಿ, ಉಪಾಧ್ಯಕ್ಷರಾಗಿ ಗೀತಾ ಶೆಟ್ಟಿ ಆಯ್ಕೆ

Suddi Udaya

ವಿಶ್ವ ಹಿಂದೂ ಪರಿಷದ್ ಬಜರಂಗದಳ‌ ಬೆಳ್ತಂಗಡಿ ಪ್ರಖಂಡದಿಂದ ಹರೀಶ್ .ವಿ. ನೆರಿಯ ಅವರ ಮನೆಗೆ ಭೇಟಿ

Suddi Udaya

ಚಂದ್ರನ ಮೇಲೆ ಸ್ಪರ್ಶ, ಎಕ್ಸೆಲ್ ನಲ್ಲಿ ಹರ್ಷ

Suddi Udaya

ಉಜಿರೆ ಎಸ್. ಡಿ .ಎಮ್ ಪದವಿ ಕಾಲೇಜಿನಲ್ಲಿ ಪ್ರವೇಶ ಪ್ರಕ್ರಿಯೆ ಆರಂಭ

Suddi Udaya

ಸಿಯೋನ್ ಆಶ್ರಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

Suddi Udaya

ಪೆರಿಂಜೆ ಎನ್ನೆನ್ನೆಸ್ ಶಿಬಿರಕ್ಕೆ ವಿಭಾಗಾಧಿಕಾರಿ ಭೇಟಿ

Suddi Udaya
error: Content is protected !!