ಬೆಳ್ತಂಗಡಿ: ಮೆಸ್ಕಾಂ ಇಲಾಖೆಯಲ್ಲಿ ಬೆಳ್ತಂಗಡಿ, ಉಜಿರೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಧರ್ಮಸ್ಥಳ, ಕೊಕ್ಕಡದಲ್ಲಿ ಜೂನಿಯರ್ ಇಂಜಿನಿಯರ್ ಆಗಿದ್ದ 2020ರಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಚೆನ್ನಪಟ್ಟಣದ ಪುಟ್ಟರಾಜು (64ವ.)ರವರು ಜ.28ರಂದು ನಡೆದ ಬೈಕ್ ಅಪಘಾತದಲ್ಲಿ ಕೋಮಾವಸ್ಥೆಗೆ ತಲುಪಿದ್ದ ಇವರು ಜ.30ರಂದು ರಾತ್ರಿ ನಿಧನರಾದರು.
ಇವರ ಮೃತದೇಹವನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾನ ನೀಡಲಾಗಿದೆ.
ಮೃತರು ಪತ್ನಿ, ಓರ್ವ ಪುತ್ರ, ಓರ್ವೆ ಪುತ್ರಿ, ಬಂಧು ಬಳಗವನ್ನು ಅಗಲಿದ್ದಾರೆ.