ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಳಿಯಂಗಡಿ ರಿಕ್ಷಾ ನಿಲ್ದಾಣದಲ್ಲಿ ಮತ್ತು ಕುಕ್ಕೇಡಿ ಹಾಲಿನ ಡಿಪ್ಪೋದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು 15 ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭ ತಾಲೂಕು ನರೇಗಾ ಐಇಸಿ ಸಂಯೋಜಕರು ಶ್ರೀಮತಿ ವಿನಿಷ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಹಾಗೂ ಸಾಮಾಜಿಕ ಪರಿಶೋಧನೆಯ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಅಧ್ಯಕ್ಷರು ಶ್ರೀಮತಿ ಅನಿತಾ ಕೆ., ಪ್ರಭಾರ ಸಹಾಯಕ ನಿರ್ದೇಶಕರು(ಗ್ರಾ.ಉ) ಶ್ರೀಮತಿ ಸಫಾನ, ಸಾಮಾಜಿಕ ಪರಿಶೋಧನಾ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಹರೀಶ್,ಗ್ರಾ.ಪಂ ಸಿಬ್ಬಂದಿಗಳಾದ ಗಣೇಶ್, ಪ್ರಶಾಂತ್, ರೇವತಿ,ಗ್ರಾಮ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.