29.9 C
ಪುತ್ತೂರು, ಬೆಳ್ತಂಗಡಿ
April 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

 ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿ ನಕ್ಸಲ್ ರವೀಂದ್ರ ಶರಣಾಗತಿ

ಚಿಕ್ಕಮಗಳೂರು: ನಕ್ಸಲ್ ಶರಣಾಗತಿ ಹಿನ್ನೆಲೆ, ಚಿಕ್ಕಮಗಳೂರು ಎಸ್ಪಿ ಕಚೇರಿಗೆ ನಕ್ಸಲ್ ರವೀಂದ್ರ ಆಗಮಿಸಿದ್ದು, ಎಸ್ಪಿ ವಿಕ್ರಂ ಅಮಟೆ ಮುಂದೆ ಶರಣಾಗಿದ್ದಾರೆ.

ನಾಗರೀಕ ಶಾಂತಿಗಾಗಿ ವೇದಿಕೆ ಸದಸ್ಯರ ಜೊತೆ ಆಗಮಿಸಿದ ರವೀಂದ್ರ, ಎಸ್ಪಿ ವಿಕ್ರಂ ಅಮಟೆ ಮುಂದೆ ಹಾಜರಾಗಿದ್ದು, ಒಂದೂವರೆ ದಶಕದ ನಕ್ಸಲ್ ಹೋರಾಟಕ್ಕೆ ವಿದಾಯ ಹೇಳಿದ್ದು, ಮುಖ್ಯವಾಹಿನಿಗೆ ಆಗಮಿಸಿದ್ದಾರೆ.

ಜಿಲ್ಲೆಯಲ್ಲಿ ರವೀಂದ್ರ ಮೇಲೆ 20 ಕೇಸ್ ಗಳಿವೆ, ಒಂದೂವರೆ ದಶಕದಿಂದ ಭೂಗತರಾಗಿದ್ದ ರವೀಂದ್ರ ಇದೀಗ ನಕ್ಸಲ್ ಶರಣಾಗತಿಯ ಭಾಗವಾಗಿ ಪೊಲೀಸರಿಗೆ ಶರಣಾಗಿದ್ದಾರೆ.

ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ಲೂರು, ಮಾರೆಪ್ಪ ಅರೋಲಿ, ಕೆ.ವಸಂತ(ತಮಿಳುನಾಡು), ಟಿ.ಎನ್.ಜಿಷಾ(ಕೇರಳ) ಒಳಗೊಂಡ ತಂಡ ಜ.8ರಂದು ಮುಖ್ಯವಾಹಿನಿಗೆ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಎಲ್ಲರನ್ನು ಸ್ವಾಗತಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ತಂಡದಿಂದ ಬೇರ್ಪಟ್ಟಿದ್ದ ಕೋಟೆಹೊಂಡ ರವೀಂದ್ರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರನ್ನು ಸಂಪರ್ಕಿಸುವ ಪ್ರಯತ್ನವನ್ನು ಶಾಂತಿಗಾಗಿ ನಾಗರಿಕ ವೇದಿಕೆ ಮತ್ತು ನಕ್ಸಲ್ ಶರಣಾಗತಿ ಸಮಿತಿ ಮಾಡಿದೆ.

Related posts

ಇಂದಬೆಟ್ಟು ವಲಯದ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ವಲಯ ಸಭೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಅಕೊಲೆಡ್ಸ್ ತರಗತಿಗಳಿಗೆ ಚಾಲನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನೆ

Suddi Udaya

ಪಟ್ರಮೆ: ಅನಾರು ಶಾಲೆ ಬಳಿ ಚರಂಡಿಗೆ ಬಿದ್ದ ಕೋಳಿ ಸಾಗಾಟದ ಲಾರಿ

Suddi Udaya

ಸುರ್ಯ ಸದಾಶಿವರುದ್ರ ದೇವಸ್ಥಾನ ಪ್ರತಿಷ್ಠಾ ವಾರ್ಷಿಕೋತ್ಸವ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಕೊನೆಗೊಳ್ಳಲು ಕೊಲ್ಲೂರು ಹಾಗೂ ಕದ್ರಿ ದೇವಸ್ಥಾನದಿಂದ ಧಮ೯ ಸಂರಕ್ಷಣಾ ಯಾತ್ರೆ

Suddi Udaya
error: Content is protected !!