ಉಡುಪಿ: ಫೆ. 1 ರಂದು ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಮಧ್ವ ನವರಾತ್ರೋತ್ಸವದ ಸಭಾ ಕಾರ್ಯಕ್ರಮದಲ್ಲಿ ಆಯಾಸ ರಹಿತರಾದ ಶ್ರೀಮಧ್ವಾಚಾರ್ಯರು ಶಿಷ್ಯರಿಗಾಗಿ ವಿಶ್ರಾಂತಿ ಸ್ವೀಕರಿಸಿದ ಕ್ಷೇತ್ರವಾದ ಮಧ್ವ ನಗರದ ಮಧ್ವಕಟ್ಟೆಯ ಅರ್ಚಕರಾದ ವಿದ್ವಾನ್ ರಾಘವೇಂದ್ರ ಭಟ್ ಲಕ್ಷ್ಮೀ ನರಸಿಂಹ ಮಠ ಮದ್ದಡ್ಕ ಇವರನ್ನು ಸನ್ಮಾನಿಸಿದರು.
ಶ್ರೀ ಪುತ್ತಿಗೆ ಮಠದ ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಹಾಗೂ ಹಿರಿಯ ವಿದ್ವಾಂಸರಾದ ಪ್ರೊ ವ್ಯಾಸನಕೆರೆ ಪ್ರಭಂಜನಾಚಾರ್ಯರು ಉಪಸ್ಥಿತರಿದ್ದರು