ಗೇರುಕಟ್ಟೆ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾದ ವರ್ಷಾವಧಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆದಿರುವ ಪ್ರಯುಕ್ತ ಭಕ್ತಾದಿಗಳಿಗೆ ಅಭಿನಂದನೆ ಹಾಗೂ ಲೆಕ್ಕಪತ್ರಮಂಡನೆ ಮತ್ತು ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಸದಸ್ಯರಿಗೆ ಅಧಿಕಾರ ಹಸ್ತಾಂತರ ಸಭೆ ಫೆ.2 ರಂದು ಕ್ಷೇತ್ರದ ಅನ್ನ ಪೂರ್ಣ ಭೋಜನಾಲಯದ ಸಭಾಂಗಣದಲ್ಲಿ ನಡೆಯಿತು.
ತಣ್ಣೀರುಪಂತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ನಾಳ ದೇವಸ್ಥಾನದ ಆಡಳಿತಾಧಿಕಾರಿ ಶ್ರವಣ್ ಕುಮಾರ್ ಅಧ್ಯಕ್ಷತೆ ವಹಿಸಿ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲು ಸಹಕರಿಸಿದ ಸಮಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಭಕ್ತರಿಗೆ ಅಭಿನಂದನೆ ಸಲ್ಲಿಸಿದ್ದರು.
ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಛೇರಿ ನಿರ್ವಾಹಕರಾದ ಗಿರೀಶ್ ಶೆಟ್ಟಿ ಜಿ.ಎಸ್.ಜಾತ್ರೋತ್ಸವ ಲೆಕ್ಕ ಪತ್ರ ಸಭೆಯಲ್ಲಿ ಮಂಡಿಸಿದರು.
ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ.,ಸದಸ್ಯರಾಗಿ ಹೇಮಂತ ಕುಮಾರ್ ,ರಾಘವ ಹೆಚ್.ಶರತ್ ಕುಮಾರ್ ಶೆಟ್ಟಿ,ಹರೀಶ್ ಗೌಡ ಕೆ.ಮೋಹಿನಿ ಬಿ.ಗೌಡ,ರೀತಾ ಚಂದ್ರಶೇಖರ, ನೀನಾ ಕುಮಾರ್, ಪ್ರಧಾನ ಅರ್ಚಕರಾದ ವೇ.ಮು.,ರಾಘವೇಂದ್ರ ಅಸ್ರಣ್ಣರು ನೂತನ ಸಮಿತಿಗೆ ಆಯ್ಕೆಯಾಗಿದ್ದಾರೆ.
ದೇವಸ್ಥಾನದಲ್ಲಿ ಮಧ್ಯಾಹ್ನದ ಮಹಾಪೂಜೆ ಬಳಿಕ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ದೇವಸ್ಥಾನದ ವತಿಯಿಂದ ಗೌರವಿಸಿ, ದೇವಸ್ಥಾನದ ಅಧಿಕಾರ ಹಸ್ತಾಂತರ ಮಾಡಿದರು. ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಹರೀಶ್ ಕುಮಾರ್ ಬಿ, ಶರತ್ ಕುಮಾರ್ ಶೆಟ್ಟಿ, ಹರೀಶ್ ಗೌಡ ಕೆ, ನೀನಾ ಕುಮಾರ್, ಶ್ರೀಮತಿ ಮೋಹಿನಿ ಬಿ ಗೌಡ,ರೀತಾ ಚಂದ್ರಶೇಖರ ಉಪಸ್ಥಿತರಿದ್ದರು. ಅಭಿವೃದ್ಧಿ ಮಂಡಳಿ, ಜಾತ್ರೋತ್ಸವ ಸಮಿತಿ, ಭಜನಾ ಮಂಡಳಿ, ಶ್ರೀ ದುರ್ಗಾ ಮಾತೃ ಮಂಡಳಿ ಪದಾಧಿಕಾರಿಗಳು ಮತ್ತು ಭಕ್ತರು ಆಗಮಿಸಿದರು.