ಕಲ್ಮಂಜ: ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರದಲ್ಲಿ ಪ್ರತಿಷ್ಠಾ ದಿನಾಚರಣೆ ಹಾಗೂ ವಾರ್ಷಿಕ ಜಾತ್ರೆ, ರಥೋತ್ಸವವು ಫೆ.3 ರಿಂದ ಫೆ.5 ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಶ್ರೀ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗುತ್ತಿದೆ.
ಇಂದು (ಫೆ.3) ಶ್ರೀ ದೇವರಿಗೆ ಸಮರ್ಪಿಸಲಿರುವ ನೂತನ ಪುಷ್ಪರಥದ ಭವ್ಯ ಶೋಭಾಯಾತ್ರೆಗೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನ, ಅನುವಂಶಿಕ ಆಡಳಿತ ಮೊಕ್ತೇಸರರು ಶರತ್ ಕೃಷ್ಣ ಪಡ್ವೆಟ್ನಾಯರು ಚಾಲನೆ ನೀಡಿದರು.
ಪುಷ್ಪರಥದ ದಾನಿಗಳಾದ ಶ್ರೀಮತಿ ಸುಕನ್ಯಾ ಮತ್ತು ಡಿ. ಜಯರಾಮ ರಾವ್ ಮತ್ತು ಮಕ್ಕಳು, ಶ್ರೀ ಮಹಾದೇವಿ ಕೃಪಾ, ಮುಂಚಾನ, ಸತ್ಯನಪಲ್ಕೆ, ಕಲ್ಮಂಜ ಇವರು ಪುಷ್ಪರಥವನ್ನು ಶ್ರೀ ಕ್ಷೇತ್ರ ಪಜಿರಡ್ಕ ದೇವಸ್ಥಾನಕ್ಕೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯಿಂದ ವಾದ್ಯ, ಚೆಂಡೆ, ಕಲ್ಮಂಜ ಗ್ರಾಮದ ವಿವಿಧ ಭಜನಾ ತಂಡಗಳಿಂದ ಮೆರವಣಿಗೆಯ ಮೂಲಕ ಕ್ಷೇತ್ರಕ್ಕೆ ಸಮರ್ಪಿಸಿದರು.
ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಆಶೀರ್ವದಿಸಿದರು.
ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಪಜಿರಡ್ಕ ಆಡಳಿತಾಧಿಕಾರಿ ನಾಗಶಯನ ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಕೆ. ಮೋಹನ್ ಕುಮಾರ್ , ರತನ್ ಕುಮಾರ್ ಜೈನ್ ಹುಣಿಪ್ಪಾಜೆ , ಬಾಲಚಂದ್ರ ರಾವ್ ಗುತ್ತುಮನೆ , ರಥದ ಶಿಲ್ಪಿ ಸುಧಾಕರ ಡೋಂಗ್ರೆ ಬಜಗೋಳಿ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ರವಿಕುಮಾರ್ ಭಟ್, ವೆಂಕಟರಮಣ ಹೆಬ್ಬಾರ್ ಪರಾರಿ, ಚೆನ್ನಪ್ಪ ಗೌಡ ಕರಿಯನೆಲ, ಉಜಿರೆ ಶ್ರೀ ದೇಶಿಕೇಂದ್ರ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ನವೀನ್ ಪ್ರಕಾಶ್ , ಸಿ.ಜಿ. ಪ್ರಭಾಕರ್ ಕನ್ಯಾಡಿ, ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಮಲ,ಬೆಳ್ತಂಗಡಿ ನೋಟರಿ ವಕೀಲರಾದ ಶಶಿಕಿರಣ ಜೈನ್ , ಬಿ. ಗೋಪಾಲಕೃಷ್ಣ ಗೌಡ , ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನಿಡಿಗಲ್ ಅಧ್ಯಕ್ಷ ಶಶಿಧರ ಎಂ., ಕೃಷ್ಣಪ್ಪ ಗುಡಿಗಾರ್ ಅಲೆಕ್ಕಿ, ರವೀಂದ್ರ ಪೂಜಾರಿ ಆರ್ಲ, ತುಕಾರಾಮ ಸಾಲಿಯಾನ್ ಆರ್ಲ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಶಿಧರ ಕಲ್ಮಂಜ,ರಾಘವ ಕಲ್ಮಂಜ, ರಾಧಾಕೃಷ್ಣ ಗೌಡ,ಜಯಪ್ರಕಾಶ್ ಶೆಟ್ಟಿ, ವಕೀಲರಾದ ಗೋಪಾಲಕೃಷ್ಣ ಗೌಡ,ವಿಜಯ ನಿಡಿಗಲ್,ಶ್ರೀಧರ್ ಕಲ್ಮಂಜ, ಸಚಿನ್ ಕಲ್ಮಂಜ, ವಿಶ್ವನಾಥ ಭಂಢಾರಿ,ಪರಾರಿ ವೆಂಕಟರಮಣ ಹೆಬ್ಬಾರ್, ಮೋನಪ್ಪ ಗೌಡ,ಸುನೀಲ್ ಕನ್ಯಾಡಿ,ಕೃಷ್ಣ ಮೂರ್ತಿ,ಬಾಲಚ್ಚಂದ್ರ ಗುತ್ತುಮನೆ,ಉದಯ ಧರ್ಮಸ್ಥಳ, ಅರವಿಂದ ಕಾರಂತ್ ಉಜಿರೆ,ಪದ್ಮನಾಭ ಶೆಟ್ಟಿಗಾರ್,ಕುಮಾರನಾಥ ಶೆಟ್ಟಿ, ಸತ್ಯ ಗುಡಿಗಾರ್,ರಾಘವೇಂದ್ರ ಗೌಡ ಆಚಾರಿಬೆಟ್ಟು,ವಿಶ್ವನಾಥ ಶೆಟ್ಟಿ, ಮಂಜುನಾಥ ಶೆಟ್ಟಿ ನಿಡಿಗಲ್,ಕೃಷ್ಣಪ್ಪ ಮಡಿವಾಳ,ಧರ್ಣಪ್ಪ ಲಿಂಗಾಯಿತ,ಮೋನಪ್ಪ ಟಿ ಹಾಗೂ ದೇವಸ್ಥಾನದ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.