ಬೆಳ್ತಂಗಡಿ: ತೆಕ್ಕಾರುವಿನ ಅಕ್ಷತಾ ಎಂ ಅವರು ಬಿ.ಎಸ್ಸಿ. (ಹಾನರ್ಸ್) ಕೃಷಿ ಸ್ನಾತಕ ಪದವಿಯಲ್ಲಿ 2023-24ನೇ ಸಾಲಿನಲ್ಲಿ 10.00 ಅಂಕಗಳಿಗೆ ಸರಾಸರಿ 8.98 ಅಂಕಗಳನ್ನು ಗಳಿಸಿ ಶಿವಮೊಗ್ಗ ಕೃಷಿ ಮಹಾವಿದ್ಯಾಲಯದಲ್ಲಿ ಗ್ರಾಮೀಣ ಕೋಟಾದ ಅಡಿಯಲ್ಲಿ ಪ್ರಥಮ ಶ್ರೇಯಾಂಕಿತರಾಗಿರುವುದರಿಂದ ಇವರಿಗೆ ಇತ್ತೀಚೆಗೆ ಜರುಗಿದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಒಂಬತ್ತನೇ ಘಟಿಕೋತ್ಸವದಲ್ಲಿ ದಿವಂಗತ ಶ್ರೀಮತಿ ಪಾರ್ವತಮ್ಮ ಮತ್ತು ಶ್ರೀ ಅಮೃತಪ್ಪ ಹುಗ್ಗಿ ಚಿನ್ನದ ಪದಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಇವರು ತೆಕ್ಕಾರುವಿನ ಶ್ರೀ ಗೋಪಾಲಕೃಷ್ಣ ಸೇವಾ ಟ್ರಸ್ಟ್ ನ ಟ್ರಸ್ಟಿ , ಪ್ರಗತಿಪರ ಕೃಷಿಕ ಅನಂತ ಪ್ರಸಾದ್ ನೈತಡ್ಕ ರವರ ಪುತ್ರಿ.