23.7 C
ಪುತ್ತೂರು, ಬೆಳ್ತಂಗಡಿ
February 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ

ಬೆಳ್ತಂಗಡಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಚಾರ್ಮಾಡಿ ಗ್ರಾಮದ ಪವನ್ ಕುಮಾರ್ ರವರು, ಅದೇ ಗ್ರಾಮದ ನಿವಾಸಿಯಾದ ನಿಝಮುದ್ದೀನ್ (S/o ಯು ಎಂ ಉಸ್ಮಾನ್ ) ರವರ ವಿರುದ್ಧ ಸಲ್ಲಿಸಲಾಗಿದ್ದ ರೂ . 1, 00,000 ಮೊತ್ತದ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯನ್ನು ದೋಷಿ ಎಂದು ನ್ಯಾಯಾಲಯವು ತೀರ್ಪು ನೀಡಿರುತ್ತದೆ. ಆರೋಪಿಗೆ ರೂ. 1,03,000 ದಂಡವನ್ನು ವಿಧಿಸಲಾಗಿದೆ.

ವಸೂಲಿ ಮಾಡಿದ ದಂಡದ ಮೊತ್ತದಲ್ಲಿ 1, 02,000 ಮೊತ್ತವನ್ನು ಪವನ್ ಕುಮಾರ್ ರವರಿಗೆ ಪರಿಹಾರವಾಗಿ ಪಾವತಿಸಬೇಕು, ದಂಡದ ಮೊತ್ತವನ್ನು ಪಾವತಿಸಲು ತಪ್ಪಿದಲ್ಲಿ ಆರೋಪಿಯು 6 ತಿಂಗಳ ಅವಧಿಗೆ ಜೈಲು ಶಿಕ್ಷೆಗೆ ಗುರಿಯಾಗುತ್ತಾನೆ ಎಂದು ನ್ಯಾಯಾಲಯವು ತೀರ್ಪನ್ನು ನೀಡಿರುತ್ತದೆ.


ಸದರಿ ಚೆಕ್ ಬೌನ್ಸ್ ಪ್ರಕರಣದಲ್ಲಿ ಪವನ್ ಕುಮಾರ್ ಪರವಾಗಿ ನ್ಯಾಯವಾದಿಯಾದ ಶ್ರೀಮತಿ ಪ್ರಿಯಾಂಕ ಶಿವನ್ ರವರು ವಾದವನ್ನು ಮಂಡಿಸಿರುತ್ತಾರೆ

Related posts

ಧರ್ಮಸ್ಥಳ ಶ್ರೀ ಧ ಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಶಿರ್ಲಾಲು : ಮಜಲಪಲ್ಕೆ ನಿವಾಸಿ ಹರಿಶ್ಚಂದ್ರ ಪೂಜಾರಿ ರವರಿಗೆ ಬಿಜೆಪಿ ಗ್ರಾಮ ಸಮಿತಿಯ ಸದಸ್ಯರಿಂದ ಆರ್ಥಿಕ ನೆರವು

Suddi Udaya

ಕನ್ಯಾಡಿ ಶ್ರೀ ರಾಮಕ್ಷೇತ್ರಕ್ಕೆ ಧರ್ಮಸ್ಥಳ ಗ್ರಾಮದ ಭಕ್ತರಿಂದ ಹೊರೆಕಾಣಿಕೆ ಪ್ರಯುಕ್ತ ಅಕ್ಕಿ ಸಮರ್ಪಣೆ

Suddi Udaya

ಪದ್ಮುಂಜ: ಆಟೋ ರಿಕ್ಷಾ ಪಲ್ಟಿ, ಗಂಭೀರ ಗಾಯಗೊಂಡ ಚಾಲಕ ಮೃತ್ಯು

Suddi Udaya

ಹದಗೆಟ್ಟಿರುವ ಸೋಮಂತಡ್ಕ ಮಜಲು ರಸ್ತೆ : ಸಂಬಂಧ ಪಟ್ಟವರು ರಸ್ತೆಯ ದುರವಸ್ಥೆಯನ್ನು ಸರಿಪಡಿಸುವಂತೆ ಗ್ರಾಮಸ್ಥರ ಮನವಿ

Suddi Udaya

ಇಂದಬೆಟ್ಟು: ಸಿಡಿಲು ಬಡಿದು ಮಹಿಳೆ ಅಸ್ವಸ್ಥ

Suddi Udaya
error: Content is protected !!