ನಡ : ದೇಯಿ ಬೈದೆದಿ ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಮಾ. 1 ರಿಂದ ಮಾರ್ಚ್ 5ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಯಶಸ್ಸು ಗೊಳಿಸುವ ಬಗ್ಗೆ ನಡ ಶ್ರೀ ಗುರು ನಾರಾಯಣ ಸೇವಾ ಸಂಘದಲ್ಲಿ ಹಾಗೂ ನಾವೂರು ಗ್ರಾಮಗಳ ಗೆಜ್ಜೆ ಗಿರಿಯ ಭಕ್ತಾಭಿಮಾನಿಗಳ ಸಮಾಲೋಚನ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ನಡ ಶ್ರೀ ಗುರುನಾರಾಯಣ ಸೇವಾ ಸಂಘ ಅಧ್ಯಕ್ಷ ವೀರಪ್ಪ ಪೂಜಾರಿ ಕೊಟ್ಲಪ್ಪಾಡಿ ಇವರು ಕ್ಷೇತ್ರದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಶ್ರೀ ಕ್ಷೇತ್ರ ಗೆಜ್ಜಗಿರಿ ಜಾತ್ರೆೋತ್ಸವ ಸಮಿತಿಯ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ ರವರು ಶ್ರೀ ಕ್ಷೇತ್ರದಲ್ಲಿ ನಡೆಯುವ ಮಡಿಲು ಸೇವೆ ಹಾಗೂ ಉತ್ಸವದ ಮಾಹಿತಿಯನ್ನು ಸಭೆಗೆ ನೀಡಿ ತಾಲೂಕಿನ ಎಲ್ಲಾ ಭಕ್ತಾಭಿಮಾನಿಗಳನ್ನು ಜಾತ್ರೋತ್ಸವಕ್ಕೆ ಆಮಂತ್ರಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ದಿವಾಕರ ಸಾಲಿಯನ್ ಸುರ್ಯ ,ಮಹಿಳಾ ಕಾರ್ಯದರ್ಶಿಯಾದ ಚಿತ್ರಾವತಿ ಭಂಡಾರಿ ಕೋಡಿ, ಮಾಜಿ ಅಧ್ಯಕ್ಷರುಗಳಾದ ರಮೇಶ್ ಕೋಟ್ಯಾನ್ ಕುತ್ರೊಟ್ಟು, ಗುರುನಾರಾಯಣ ಸೇವಾ ಸಂಘ ಬೆಳ್ತಂಗಡಿ ಇದರ ನಿರ್ದೇಶಕರಾದ ಜಯಕುಮಾರ್ ಸುರ್ಯ, ನಾವೂರು ಬಿಲ್ಲವ ಸಂಘದ ಅಧ್ಯಕ್ಷ ಸುದರ್ಶನ ನಾವೂರು, ಕಾರ್ಯದರ್ಶಿ ಪ್ರಕಾಶ್ ಕಣಾಲು, ಗೌರವ ಸಲಹೆಗಾರರಾದ ಉಮೇಶ್ ಹೊಕ್ಕಿಲ ,ಕೃಷ್ಣಪ್ಪ ಪೂಜಾರಿ ಕುದುಪುಲ, ಶುಭಕರ ಕೆ ಎಂ ಕೂಡೇಲು , ಹಾಗೂ ಶ್ರೀ ಕ್ಷೇತ್ರದ ಗೆಜ್ಜೆಗಿರಿಯ ನಡ ಹಾಗೂ ನಾವೂರು ಗ್ರಾಮದ ಭಕ್ತಭಿಮಾನಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಲಾಯಿಲ ಜಿಲ್ಲಾ ಪಂಚಾಯಿತ್ ಸಂಚಾಲಕಿ ಸೌಮ್ಯ ಲಾಯಿಲ ಸಂಘಟಿಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಗುರುರಾಯಣ ಸೇವಾ ಸಂಘ ನಡ ಇಲ್ಲಿಗೆ ಗಾಡ್ರೇಜ್ ಅನ್ನು ಕೊಡುಗೆಯಾಗಿ ನೀಡಿರುವ ವೀಣಾ ಕೋಯಗುಡ್ಡೆ ನಡ ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಶ್ರೀ ಗುರುನಾರಾಯಣ ಸೇವಾ ಸಂಘ ನಡ ಇದರ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಕೆ ಭಂಡಾರಿಕೋಡಿಯವರು ಧನ್ಯವಾದವಿತ್ತರು.