23.3 C
ಪುತ್ತೂರು, ಬೆಳ್ತಂಗಡಿ
April 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರಜತ ಸಂಭ್ರಮದಲ್ಲಿರುವ ಉಜಿರೆಯ ಬೆನಕ ಆಸ್ಪತ್ರೆಗೆ ಸಭಾಧ್ಯಕ್ಷ ಯು.ಟಿ.ಖಾದರ್ ಭೇಟಿ

ಉಜಿರೆ: ಎರಡು ವೈದ್ಯರಿಂದ ಆರಂಭವಾದ ಆಸ್ಪತ್ರೆ ಇಂದು ವಿವಿಧ ಆರೋಗ್ಯ ಕ್ಷೇತ್ರಗಳಲ್ಲಿ ಪರಿಣತಿ ಪಡೆದ 40 ಕ್ಕಿಂತಲೂ ಅಧಿಕ ತಜ್ಞ ವೈದ್ಯರ ಸೇವೆಯನ್ನು ಬೆನಕ ಉಜಿರೆಯಂತಹ ಪರಿಸರದಲ್ಲಿ ಒದಗಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಬದ್ಧತೆಯೊಂದಿಗೆ ಆರಂಭವಾದ ಉಜಿರೆಯ ಬೆನಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಸಮಾಜದ ಅಗತ್ಯತೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವುದು ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ. ಬೆನಕ ಆಸ್ಪತ್ರೆ ಈ ಪ್ರದೇಶದ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಎಂದು ಸನ್ಮಾನ್ಯ ಯು.ಟಿ.ಖಾದರ್ ತಿಳಿಸಿದರು.


ಕರ್ನಾಟಕ ವಿಧಾನ ಸಭೆಯ ಸಭಾಪತಿಗಳಾದ ಯು.ಟಿ.ಖಾದರ್ ಅವರು ಇತ್ತೀಚೆಗೆ ರಜತ ಸಂಭ್ರಮದಲ್ಲಿರುವ ಉಜಿರೆಯ ಬೆನಕ ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿನ ವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿ ಮಾತನಾಡುತ್ತಿದ್ದರು. ನಮ್ಮ ಬೆನಕ ಸಂಸ್ಥೆ ಮತ್ತು ಯು.ಟಿ.ಖಾದರ್ ಅವರಿಗೆ ಅವಿನಾಭಾವ ಸಂಬಂಧ. ಕರ್ನಾಟಕ ಸರಕಾರದ ಆರೋಗ್ಯ ಸಚಿವರಾಗಿದ್ದಾಗ ಯು.ಟಿ.ಖಾದರ್ ಅವರು ಬೆನಕ ಆಸ್ಪತ್ರೆಗೆ ಬಂದು ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಕೊಠಡಿ ಯನ್ನು ಉದ್ಘಾಟನೆ ಮಾಡಿದ್ದು ಪಟ್ಟಣಗಳ ದೊಡ್ಡ ಆಸ್ಪತ್ರೆಗಳಿಗೆ ಸೀಮಿತವಾದ ಮೈಕ್ರೊಸರ್ಜರಿ, ಕೀಹೋಲ್ ಸರ್ಜರಿ , ಕಣ್ಣಿನ ಸರ್ಜರಿ ಮೊದಲಾದ ಸಂಕೀರ್ಣ ಶಸ್ತ್ರಚಿಕಿತ್ಸೆಗಳಿಗೆ ನಮ್ಮ ಬೆನಕ ಆಸ್ಪತ್ರೆ ಗುರುತಿಸಲ್ಪಟ್ಟು ದೂರದೂರಿನಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಿರುವುದು ಹೆಮ್ಮೆಯ ಸಂಗತಿ. ಬೆನಕ ಆಸ್ಪತ್ರೆಯ ಹೆಮ್ಮೆಯ ರಜತ ಸಂಭ್ರಮದ ಸಂದರ್ಭದಲ್ಲಿ ಕರ್ನಾಟಕ ವಿಧಾನ ಸಭೆಯ ಸಭಾಪತಿಗಳಾದ ಯು.ಟಿ.ಖಾದರ್ ಅವರು ಬೆನಕ ಆಸ್ಪತ್ರೆಗೆ ಆಗಮಿಸಿದ್ದು ನಮಗೆಲ್ಲಾ ಸಂತೋಷ ಹಾಗೂ ಸಾರ್ಥಕ್ಯದ ಕ್ಷಣ ಎಂದು ಬೆನಕ ಆಸ್ಪತ್ರೆಯ ವೈದ್ಯಕೀಯ ನರ‍್ದೇಶಕ ಡಾ. ಗೋಪಾಲಕೃಷ್ಣ ಸ್ವಾಗತಿಸುತ್ತಾ ತಿಳಿಸಿದರು.


ಆಸ್ಪತ್ರೆಯ ಪರವಾಗಿ ಯು.ಟಿ.ಖಾದರ್ ಅವರಿಗೆ ಡಾ. ಗೋಪಾಲಕೃಷ್ಣ, ಡಾ.ಆದಿತ್ಯ ರಾವ್ ಹಾಗೂ ಡಾ.ಅಂಕಿತಾ ಅವರು ಗೌರವರ್ಪಣೆ ಸಲ್ಲಿಸಿದರು. ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಉಪಸ್ಥಿತರಿದ್ದರು. ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದ ಕಾರ‍್ಯಕ್ರಮನ್ನು ಆಸ್ಪತ್ರೆಯ ಸಾರ್ವಜನಿಕ ಸಂರ್ಪಕಾಧಿಕಾರಿ ಎಸ್.ಜಿ.ಭಟ್ ನಿರ್ವಹಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವಸ್ಯ ವಂದಿಸಿದರು.

Related posts

ಬಂಟರ ಯಾನೆನಾಡವರ ಸಂಘ ಬೆಳ್ತಂಗಡಿ ನೇತೃತ್ವದಲ್ಲಿ: ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ – ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ. ವಿಶ್ವ ಬಂಟರ ಮಾಹಿತಿ ಕೋಶ’ಕ್ಕಾಗಿ ಕುಟುಂಬದ ಸಮಗ್ರ ಮಾಹಿತಿ ಸಂಗ್ರಹ: ಅಜಿತ್ ಕುಮಾರ್ ರೈ ಮಾಲಾಡಿ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ಮಾದಕ ದ್ರವ್ಯ ಹಾಗೂ ಅಕ್ರಮ ಸಾಗಾಟ ವಿರೋಧಿ ದಿನಾಚರಣೆ

Suddi Udaya

ಮೇ. 16 : ತುರ್ತು ಕಾಮಗಾರಿ ಪ್ರಯುಕ್ತ ನಾನಾ ಕಡೆಗಳಲ್ಲಿ ವಿದ್ಯುತ್ ಕಡಿತ

Suddi Udaya

ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಭಾರತೀಯ ಯುವ ರೆಡ್ ಕ್ರಾಸ್ ಮತ್ತು ರೋವರ್ಸ್ ರೇಂಜರ್ಸ್ ಸಹಯೋಗದಿಂದ “70ನೇ ಅಖಿಲ ಭಾರತ ಸಹಕಾರ ಸಪ್ತಾಹ 2023” ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನದ ಮಂಜೂರಾತಿ ಪತ್ರ ವಿತರಣೆ

Suddi Udaya

ಕಾಪಿನಡ್ಕ ಶಾಲೆಯಲ್ಲಿ ಬುಲ್ ಬುಲ್ ದಳ ಉದ್ಘಾಟನೆ

Suddi Udaya
error: Content is protected !!