ಗುರುವಾಯನಕೆರೆ: ಪ್ರತಿಷ್ಠಿತ ವಿಜಯ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಇದರ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಯುವ ಉದ್ಯಮಿ, ಸಹಕಾರಿ ರಂಗದಲ್ಲಿ ಹಲವಾರು ವರ್ಷಗಳ ಅನುಭವವನ್ನು ಹೊಂದಿರುವ ಅಜಿತ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಜಯಂತ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಎಂ ಜಯರಾಮ ಭಂಡಾರಿ, ಬಾಲಕೃಷ್ಣ ಪೂಂಜ ಹೆಚ್, ಎಸ್ ಜಯರಾಮ ಶೆಟ್ಟಿ, ಎಂ ಗೋಪಾಲಕೃಷ್ಣ ಶೆಟ್ಟಿ, ಕೃಷ್ಣ ರೈ, ಜಯಂತ ಶೆಟ್ಟಿ, ಮಂಜುನಾಥ ರೈ, ಸೀತಾರಾಮ ಶೆಟ್ಟಿ, ಜಯರಾಮ ಶೆಟ್ಟಿ ಎಂ, ಪುಷ್ಪರಾಜ ಶೆಟ್ಟಿ, ರಾಜು ಶೆಟ್ಟಿ, ರಘುರಾಮ ಶೆಟ್ಟಿ, ಹಿಂದುಳಿದ ವರ್ಗ ಬಿ. ಕ್ಷೇತ್ರದಿಂದ ಪುರಂದರ ಶೆಟ್ಟಿ, ಸಾರಿಕ ಶೆಟ್ಟಿ, ವಿಜಯ ಬಿ. ಶೆಟ್ಟಿ ಉಪಸ್ಥಿತರಿದ್ದರು.
ಚುನಾವಣಾ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಪ್ರತಿಮಾ ಬಿ. ನಡೆಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಜಯ್ ಶೆಟ್ಟಿ ಹಾಗೂ ಸಿಬ್ಬಂದಿಗಳು ಸಹಕರಿಸಿದರು.