ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳ ವಲಯದ ಕಳೆಂಜದಲ್ಲಿ ವಾಸವಿರುವ ವಸಂತ ಗೌಡರವರು ಪಾಶ್ವ ವಾಯು ಅನಾರೋಗ್ಯ ಸಮಸ್ಯೆಯಲ್ಲಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಗುರುತಿಸಿ ಅವರಿಗೆ ಪೂಜ್ಯರು ಮಂಜೂರು ಮಾಡಿರುವ ರೂ.25000 ಸಹಾಯಧನದ ಮಂಜೂರಾತಿ ಪತ್ರವನ್ನು ಕೇಂದ್ರ ಕಚೇರಿಯ ಬಿ.ಸಿ ವಿಭಾಗದ ನಿರ್ದೇಶಕ ವಸಂತರವರು ವಿತರಿಸಿದರು.
ಈ ಸಂದರ್ಭದಲ್ಲಿ ಕಳೆಂಜ ಬಿ ಒಕ್ಕೂಟದ ನಿಕಟ ಪೂರ್ವ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ನೂತನ ಅಧ್ಯಕ್ಷೆ ಸವಿತಾ, ಧರ್ಮಸ್ಥಳ ವಲಯ ಮೇಲ್ವಿಚಾರಕರಾದ ರವೀಂದ್ರ ಬಿ, ಕಸ್ತೂರಿ ಹಾಗೂ ಸೇವಾ ಪ್ರತಿನಿಧಿ ಗೀತಾರವರು ಉಪಸ್ಥಿತರಿದ್ದರು.