ಮಚ್ಚಿನ : ಮಚ್ಚಿನ ಸರಕಾರಿ ಪ್ರೌಢಶಾಲೆಗೆ ಬ್ಯಾಂಕ್ ಆಫ್ ಬರೋಡ ಮಚ್ಚಿನ ಇಲ್ಲಿನ ಸಿಬ್ಬಂದಿ ವರ್ಗದವರು ರೂ.10,000 ಬೆಲೆ ಬಾಳುವ ಒಂದು ಮೀಟಿಂಗ್ ಟೇಬಲ್ ಅನ್ನು ಕೊಡುಗೆಯಾಗಿ ನೀಡಿರುತ್ತಾರೆ, ಹಾಗೂ 2000 ಸಾವಿರ ರೂ ಬೆಲೆ ಬಾಳುವ ಉತ್ತಮವಾದ ಹಣ್ಣುಗಳ ಗಿಡಗಳನ್ನು ಶಾಲೆಯ ಹಿಂಭಾಗದಲ್ಲಿ ನೆಡುವುದರ ಮೂಲಕ ಶಾಲೆಯ ಅಭಿವೃದ್ಧಿಯಲ್ಲಿ ಸಹಕರಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಎಸ್ ಡಿ ಎಮ್.ಸಿ ವತಿಯಿಂದ ಮಚ್ಚಿನ ಬ್ಯಾಂಕ್ ಬರೋಡ ಹಾಗೂ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.