ಮಡಂತ್ಯಾರು: ಕಳೆದ 75 ವರ್ಷಗಳಿಂದ ನೂತನ್ ಸಂಸ್ಥೆಯು ಉದ್ಯಮದೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಗುರುತಿಸಿಕೊಂಡಿರುವುದು ಶ್ಲಾಘನೀಯವಾದುದು. ನೂರಾರು ಜನರಿಗೆ ಉದ್ಯೋಗ ನೀಡಿ ಹಲವಾರು ಕುಟುಂಬಗಳಿಗೆ ಶಕ್ತಿ ನೀಡಿದ ನೂತನ್ ಸಂಸ್ಥೆ ನಮ್ಮೆಲ್ಲರ ಹೆಮ್ಮೆ ಎಂದು ಶಾಸಕ ಹರೀಶ್ ಪೂಂಜರು ಹೇಳಿದರು..
ಅವರು ಫೆ.4ರಂದು ಜಿಲ್ಲೆಯ ಪ್ರಸಿದ್ಧ ವಸ್ತ್ರ ಮಳಿಗೆ ನೂತನ್ ಕ್ಲೋತ್ ಸೆಂಟರ್ ನ ಅಮೃತ ಮಹೋತ್ಸವದ ಸಂದರ್ಭದಲ್ಲಿ ಗಿಫ್ಟ್ ಕೂಪನ್ ಡ್ರಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿಶೇಷ ಆಕರ್ಷಣೆಯಾಗಿ ಮಂಗಳೂರಿನ ಖ್ಯಾತ ಸಂಗೀತ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.
ನೂತನ್ ಸಂಸ್ಥೆಯ ಮಾಲಕರಾದ ವಿ.ಎಮ್ ರೊಡ್ರೀಗಸ್,ರಾಜೇಶ್ ರೋಡ್ರೀಗಸ್, ಪ್ರಕಾಶ್ ರೋಡ್ರೀಗಸ್ ಶಾಸಕ ಹರೀಶ್ ಪೂಂಜರವರನ್ನು ಗೌರವಿಸಿದರು.
ಪ್ರಶಾಂತ್ ಎಂ ಪಾರೆಂಕಿ, ನೂತನ್ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.