ಬೆಳ್ತಂಗಡಿ : ಗೇರುಕಟ್ಟೆ ತೋಟದ ಕೆರೆಯಲ್ಲಿ 22-10-2024 ರಂದು ಅಪರಿಚಿತ ಶವ ಪತ್ತೆಯಾದ ಸಂಬಂಧಿಸಿದಂತೆ ಡಿಎನ್ಎ ಮೂಲಕ ಮೃತನ ಗುರುತು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ಚಿದ್ದು. ಇದೀಗ ಎಸಿ ಹಾಗೂ ಪೊಲೀಸರ ಸಮ್ಮುಖದಲ್ಲಿ ದಫನ ಮಾಡಿದ್ದ ಮೃತದೇಹವನ್ನು ಹೊರತೆಗೆದು ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಸ್ಮಶಾನದಲ್ಲಿ ಪೊಲೀಸರು ಉಮರ್ ಫಾರೂಕ್ ಶವವನ್ನು 23-10-2024 ರಂದು ದಫನ ಮಾಡಿದ್ದ ಉಮರ್ ಫಾರೂಕ್ ಮೃತದೇಹವನ್ನು ಫೆ.4 ರಂದು ಬೆಳಗ್ಗೆ ಪುತ್ತೂರು ಎಸಿ ಶ್ರವಣ್ ಕುಮಾರ್ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸರು ಹಿಟಾಚಿ ಮೂಲಕ ಮಣ್ಣನ್ನು ಅಗೆದು ನಂತರ ಮೃತದೇಹವನ್ನು ಹೊರಗಡೆ ತೆಗೆದು ಮಹಜರು ಮಾಡಿ ನಂತರ ಕುಟುಂಬಕ್ಕೆ ಹಸ್ತಾಂತರ ಮಾಡಿದ್ದಾರೆ. ನಂತರ ಕುಟುಂಬಸ್ಥರು ಆಂಬುಲೆನ್ಸ್ ಮೂಲಕ ಮೃತದೇಹ ತೆಗೆದುಕೊಂಡು ಹೋಗಿ ಪರಪ್ಪು ಮಸೀದಿಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ದಫನ ಕಾರ್ಯ ನಡೆಸಿದ್ದಾರೆ.
ಪುತ್ತೂರು ಎಸಿ ಶ್ರವಣ್ ಕುಮಾರ್, ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಂ, ಪ್ರೋಪೆಷನರಿ ಐಪಿಎಸ್ ಮನಿಷಾ ಮನೋಹಿ, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ, ಬೆಳ್ತಂಗಡಿ ಟಿಹೆಚ್ಓ ಸಂಜೀತ್ ಹೆಗ್ಡೆ, ಆರ್.ಐ ಪವಡಪ್ಪ, ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಮುರುಳೀಧರ್ ನಾಯ್ಕ್, ಹೆಡ್ ಕಾನ್ಟೇನಲ್ ವಿಶ್ವನಾಥ್, ಕಳಿಯ ಪಿಡಿಓ ಸಂತೋಷ್ ಪಾಟೀಲ್,ಕಳಿಯ ಗ್ರಾಮ ಪಂಚಾಯತ್ ಗ್ರಾಮ ಆಡಳಿತಾಧಿಕಾರಿ ಪೃಥ್ವಿರಾಜ್.ಪಿ.ಶೆಟ್ಟಿ, ಗ್ರಾಮ ಸಹಾಯಕ ಸ್ಟ್ಯಾನಿ ಡಿಸೋಜ, ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಕರ್.ಎಮ್, ಸದಸ್ಯ ಕರೀಂ ಗೇರುಕಟ್ಟೆ, ಉಮರ್ ಫಾರೂಕ್ ಕುಟುಂಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.