ಬೆಳ್ತಂಗಡಿ: ತುಳುನಾಡಿನಾದ್ಯಂತ ಹೆಸರುವಾಸಿಯಾದ ‘ರಾಜ್ ಸೌಂಡ್ಸ್ &ಲೈಟ್ಸ್’ ತುಳು ಸಿನಿಮಾ ತಂಡದ ಮತ್ತೊಂದು ಸಿನಿಮಾ “ಮಿಡ್ಲ್ ಕ್ಲಾಸ್ ಫ್ಯಾಮಿಲಿ” ಜ.31 ರಂದು ತುಳುನಾಡಿನಾದ್ಯಂತ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನದೊಂದಿಗೆ ಮುನ್ನಡೆಯುತ್ತಿದ್ದು ಈ ಚಿತ್ರತಂಡವು ಫೆ.4ರಂದು ಗುರುವಾಯನಕೆರೆಯಿಂದ ಮೆರವಣಿಗೆಯ ಮೂಲಕ ಬೆಳ್ತಂಗಡಿ ಸರ್ಕಲ್ ಗೆ ಬಂದು ಬಳಿಕ ಭಾರತ್ ಟಾಕೀಸ್ ಗೆ ಭೇಟಿ ನೀಡಿದರು.
ಕಾಮಿಡಿ ಕಿಲಾಡಿ ಖ್ಯಾತಿಯ, ದಸ್ಕತ್ ತುಳು ಸಿನಿಮಾದ ನಿರ್ದೇಶಕ ಅನೀಶ್ ವೇಣೂರು ಮಾತನಾಡಿ, ರಾಜ್ ಸೌಂಡ್ಸ್ & ಲೈಟ್ಸ್ ಸಿನಿಮಾದ ಮೂಲಕ ತುಳುನಾಡಿನ ಪ್ರೇಕ್ಷಕರ ಮನಸ್ಸನ್ನು ಗೆದ್ದು ಪ್ರತಿಯೊಂದು ಪ್ರೇಕ್ಷಕನಿಗೂ ಮನೋರಂಜನೆ ನೀಡಬೇಕು ಎಂಬ ಉದ್ದೇಶದಿಂದ ಚಿತ್ರ ತಂಡವು ಇಂದು ಮತ್ತೊಂದು ಅದ್ಭುತವಾದ ಸಿನಿಮಾವನ್ನು ಮಾಡಿ ಧೈರ್ಯದಿಂದ ಮುಂದೆ ಬಂದಿದ್ದಾರೆ. ನಾನು ಸಿನಿಮಾವನ್ನು ನೋಡಿದ್ದೇನೆ ಬಹಳ ಖುಷಿ ಕೊಟ್ಟಿದೆ. ಮಿಡ್ಲ್ ಕ್ಲಾಸ್ ಸಿನಿಮಾವನ್ನು ಹೈ ಕ್ಲಾಸ್ ನಲ್ಲಿ ಗೆಲ್ಲಿಸಬೇಕು ಎಂದು ವಿನಂತಿಸಿಕೊಂಡರು.
ಇಂಡಿಯನ್ ಬುಕ್ ಆಫ್ ರೆಕಾರ್ಡ್ ಖ್ಯಾತಿಯ ಸುರಕ್ಷಾ ಆಚಾರ್ಯ ಕನ್ನಾಜೆ ಯವರು ಬಿಡಿಸಿರುವ ಸಿನಿಮಾದ ನಾಯಕಿ ನಟಿ ಸಮತಾ ಅಮೀನ್ ರವರ ಆರ್ಟ್ ವರ್ಕ್ ನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸಿನಿಮಾದ ನಿರ್ಮಾಪಕ ಆನಂದ್ ಎನ್. ಕುಂಪಲ, ಸಹ ನಿರ್ಮಾಪಕರಾದ ಭರತ್ ಗಟ್ಟಿ, ಅಶ್ವಿನಿ ರಕ್ಷಿತ್, ನಿರ್ದೇಶಕರಾದ ರಾಹುಲ್ ಅಮೀನ್, ಚಿತ್ರದ ನಾಯಕ ನಟ ವಿನೀತ್ ಕುಮಾರ್, ನಾಯಕಿ ಸಮತ ಅಮೀನ್, ಬೆಳ್ತಂಗಡಿ ಭಾರತ್ ಟಾಕೀಸ್ ನ ಮ್ಯಾನೇಜರ್ ಶೋಭಿತ್, ಚಿತ್ರದಲ್ಲಿ ಅಭಿನಯಿಸಿರುವ ಬೆಳ್ತಂಗಡಿಯ ಬಾಲ ನಟ ರಿಷಬ್ ರಾವ್, ಚಿತ್ರತಂಡ ಹಾಗೂ ಪ್ರೇಕ್ಷಕರು ಉಪಸ್ಥಿತರಿದ್ದರು.