ಕಡಿರುದ್ಯಾವರ: ದ. ಕ. ಜಿ. ಪಂ ಹಿ. ಪ್ರಾ ಶಾಲೆ ಕಡಿರುದ್ಯಾವರ ದಲ್ಲಿ ಶಾಲೆ ಎಸ್.ಡಿ.ಎಮ್.ಸಿ, ಪೋಷಕರ ಸಭೆ ಹಾಗೂ ಶಾಲಾ ಮಕ್ಕಳ ಸಂತೆಯನ್ನ ನಡೆಸಲಾಯಿತು.
ದಾನಿಗಳಾದ ಶ್ರೀಮತಿ ಪುಷ್ಪ ಶ್ರೀ ವಾಸುನಾಯ್ಕ್ ರವರು ಶಾಲೆಗೆ ಒಂದು ಮೈಕ್ ಹಾಗೂ ಸೌಂಡ್ ಬಾಕ್ಸ್ ನ ಸ್ಪೀಕರ್ ನ್ನು ಕೊಡುಗೆಯಾಗಿ ನೀಡಿದರು.
ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಶ್ರೀನಿವಾಸ್ ಗೌಡ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷರಾದ ಸರಸ್ವತಿ, ಸದ್ಯಸರು, ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಪ್ರದೀಪ್ ಎಮ್, ಶಾಲೆಯ ಶಾಲಾ ಶಿಕ್ಷಕಿಯರಾದ ಶ್ರೀಮತಿ ಅಸ್ಮಿತಾ , ಶ್ರೀಮತಿ ನಮಿತಾ, ಕುಮಾರಿ ಅನಿತಾ, ಶ್ರೀಮತಿ ಕೀರ್ತಿಕಾ ಹಾಗೂ ಶಾಲಾ ಮಕ್ಕಳ ಪೋಷಕರು, ಮಕ್ಕಳು ಉಪಸ್ಥಿತರಿದ್ದರು.