ಗುರುವಾಯನಕೆರೆ : ಪುತ್ತೂರು ಸಹಾಯಕ ಆಯುಕ್ತ ಐಎಎಸ್ ಅಧಿಕಾರಿ ಶ್ರವಣ್ ಕುಮಾರ್ (ರಾಯಚೂರು ) ಇವರು ಬೆಳ್ತಂಗಡಿಗೆ ಹೋಗುವಾಗ ರಸ್ತೆ ಬದಿಯಲ್ಲಿ ಬ್ಯಾನರ್ ನೋಡಿ 120 ವರ್ಷ ತುಂಬಿದ ಸ. ಹಿ. ಪ್ರಾ. ಶಾಲೆ ಗುರುವಾಯನಕೆರೆಗೆ ಶಾಲೆಗೆ ಭೇಟಿ ನೀಡಿದರು.
ಶಾಲೆಯಲ್ಲಿ ಮಕ್ಕಳ ಸಂಖ್ಯೆ, ಶಿಕ್ಷಕರ ಸಂಖ್ಯೆ ಯ ಮಾಹಿತಿಯನ್ನು ಪಡೆದು, ನಂತರ ತರಗತಿ ಹೋಗಿ ಮಕ್ಕಳ ಜೊತೆ ಸಂವಾದ ನಡೆಸಿದರು. ಹಾಲ್ ಪೇಂಟಿಂಗ್ ನೋಡಿ ಖುಷಿ ಪಟ್ಟರು. ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.