ಬೆಳ್ತಂಗಡಿ: ರಾಷ್ಟ್ರೀಯ ಹಬ್ಬಗಳ ಹಾಗೂ ಮಹಾಪುರುಷರ ಜಯಂತಿ ಆಚರಣಾ ಸಮಿತಿ ಆಶ್ರಯದಲ್ಲಿ
ಬೆಳ್ತಂಗಡಿ ಸವಿತಾ ಸಮಾಜ ಸಂಘದ ಸಹಕಾರದೊಂದಿಗೆ ಸವಿತಾ ಮಹರ್ಷಿ ಜಯಂತಿ ಆಚರಣೆಯು ಜ.5 ರಂದು ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಜರುಗಿತು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ದೀಪ ಪ್ರಜ್ವಲನೆ ಗೊಳಿಸಿ ಮಾತನಾಡಿ ಭಾರತದ ಆತ್ಮಮೇ ಆದ್ಯಾತ್ಮ. ದೇಶಕ್ಕೆ ಶ್ರೇಷ್ಠ ಚಿಂತನೆಯನ್ನು ನೀಡಿದವರು ಸವಿತಾ ಮಹರ್ಷಿಗಳು. ಸವಿತಾ ಮಹರ್ಷಿಗಳ ಬದುಕು ನಮಗೆಲ್ಲ ಪ್ರೇರಣೆ ಆಗಲಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಾಕೇಸರಿ ಮಾತನಾಡಿ, ಸವಿತಾ ಸಮಾಜ ಮೂಲ ಪುರುಷರು ಸವಿತಾ ಮಹರ್ಷಿಗಳು. 25 ಹೆಸರುಗಳಿಂದ ಸವಿತಾ ಸಮಾಜವನ್ನು ಕರೆಯುತ್ತಾರೆ. ಮನುಷ್ಯನಿಗೆ ಹುಟ್ಟಿನಿಂದ ಸಾಯುವ ತನಕ ಸವಿತಾ ಸಮಾಜದ ಸಹಾಯ ಬೇಕು ಎಂದು ಸವಿತಾ ಸಮಾಜದ ಇತಿಹಾಸವನ್ನು ತಿಳಿಸಿದರು.
ವೇದಿಕೆಯಲ್ಲಿ ಸವಿತಾ ಸಮಾಜದ ಉಪಾಧ್ಯಕ್ಷ ಪೂವಪ್ಪ ಭಂಡಾರಿ, ಉಪ ತಹಶೀಲ್ದಾರ್ ಶಂಕರ್ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಹೇಮಾಲತಾ ನಿರೂಪಿಸಿದರು. ಗ್ರಾಮಾಡಳಿತ ತಾಲೂಕು ಕಚೇರಿಯ ಹೇಮಾ ವಂದಿಸಿದರು.