34.7 C
ಪುತ್ತೂರು, ಬೆಳ್ತಂಗಡಿ
February 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮುಂಡಾಜೆ: ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ

ಮುಂಡಾಜೆ ಪದವಿಪೂರ್ವ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ 2024-25ನೇ ಶೈಕ್ಷಣಿಕ ವರ್ಷದ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ದ್ವಿತೀಯ ಪಿಯುಸಿ ಸ್ವಯಂ ಸೇವಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಮುಖ್ಯ ಅತಿಥಿಗಳಾಗಿ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಮುಂಡಾಜೆ ಇದರ ಅಧ್ಯಕ್ಷ ವಿನಯಚಂದ್ರ ಇವರು, ‘ವಿದ್ಯಾರ್ಥಿ ಜೀವನದಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸಬೇಕು, ಅವಕಾಶಗಳ ಸದ್ಬಳಕೆಯಿಂದ ವಿಕಸಿತ ಭಾರತದ ನಿರ್ಮಾಣ ಸಾಧ್ಯ’ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಜಾಲಿ ಓ ಎ, ಅವರು ಮಾತನಾಡಿ, ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ಮೂಲಕ ಕೈಗೊಳ್ಳಬಹುದಾದ ಸಮಾಜಮುಖಿ ಕೆಲಸಗಳ ಬಗ್ಗೆ ತಿಳಿಸಿದರು.

ವೇದಿಕೆಯಲ್ಲಿ ರೋವರ್ ಸ್ಕೌಟ್ ಲೀಡರ್ ಕೃಷ್ಣ ಕಿರಣ್ ಕೆ, ರೇಂಜರ್ ಲೀಡರ್ ವಸಂತಿ ನಾಯ್ಕ್ ಉಪಸ್ಥಿತರಿದ್ದರು. ಪ್ರಥಮ ಪಿಯುಸಿಯ ರೇಂಜರ್ ಶ್ರಾವ್ಯ ಕಾರ್ಯಕ್ರಮ ನಿರೂಪಿಸಿ, ರೇಂಜರ್ ಹೊಂಗಿರಣ ಸ್ವಾಗತಿಸಿ, ರೇಂಜರ್ ಜಲಜಾಕ್ಷಿ ಧನ್ಯವಾದಗೈದರು.

Related posts

ನಿಡ್ಲೆ : ಅಗ್ರಿಲೀಫ್ ಎಕ್ಸ್‌ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಅಂತರಾಷ್ಟ್ರೀಯ ಮನ್ನಣೆ

Suddi Udaya

ಬೆಳ್ತಂಗಡಿ ಸಂಜೀವಿನಿ ಸಂಸ್ಥೆಯಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

Suddi Udaya

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್‌ ಕಾಲೇಜಿಗೆ ಶೇ. 100 ಫಲಿತಾಂಶ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಿಂದ ಸುಲ್ಯೋಡಿ ಶಾಲೆಯಲ್ಲಿ ಶ್ರಮದಾನ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಬೆಳ್ತಂಗಡಿ ರೈತ ಮೋರ್ಚಾ ಬೆಂಬಲ

Suddi Udaya

ರೆಖ್ಯ: ಶ್ರೀಮತಿ ಬಿರ್ಕು ನಿಧನ

Suddi Udaya
error: Content is protected !!