September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕನ್ಯಾಡಿ II ಸ.ಉ.ಹಿ.ಪ್ರಾ. ಶಾಲೆಯ ಸಹಶಿಕ್ಷಕ ವೀರಣ್ಣ ಶೆಟ್ಟಿರವರಿಗೆ ಸೇವಾ ನಿವೃತ್ತಿ

ಕನ್ಯಾಡಿ: ಸ.ಉ.ಹಿ.ಪ್ರಾ.ಶಾಲೆಯಲ್ಲಿ 15ವರ್ಷಗಳ ಕಾಲ ಸಹಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ವೀರಣ್ಣ ಶೆಟ್ಟಿರವರು ಜೂ.30ರಂದು ಸೇವಾ ನಿವೃತ್ತರಾದರು.

ಇವರು 1999 ಜನವರಿ 13ರಂದು ದೇವರಗುಡ್ಡೆ ಸ.ಹಿ.ಪ್ರಾ.ಶಾಲೆಯಲ್ಲಿ ಸಹಶಿಕ್ಷಕರಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡು. 2002-03ನೇ ಸಾಲಿನಲ್ಲಿ ನಿಯೋಜನೆಗೊಂಡುಸ.ಕಿ.ಪ್ರಾ. ಶಾಲೆ ಬೆಳಾಲು-ಪೆರಿಯಡ್ಕದಲ್ಲಿ ಸ್ಥಾಪಕ ಮುಖ್ಯ ಶಿಕ್ಷಕರಾಗಿ ಒಂದೂವರೆ ವರ್ಷ ಕಾಲ ಕರ್ತವ್ಯ ನಿರ್ವಹಿಸಿದ್ದರು. ನಂತರ 2005-06ನೇ ಸಾಲಿನಲ್ಲಿ ಸ.ಹಿ.ಪ್ರಾ. ಶಾಲೆ ದೇವರಗುಡ್ಡೆಯಿಂದ ನಿಯೋಜನೆಗೊಂಡು, ಉಜಿರೆ ಸ.ಕಿ.ಪ್ರಾ. ಶಾಲೆ ಮುಂಡತ್ತೋಡಿಯಲ್ಲಿ ಸ್ಥಾಪಕ ಮುಖ್ಯಶಿಕ್ಷಕರಾಗಿ ಮೂರುವರೆ ವರ್ಷ ಕಾಲ ಸೇವೆ ಸಲ್ಲಿಸಿ, ಸರಕಾರದ ಅನುದಾನದಲ್ಲಿ ಶಾಲಾ ಕಟ್ಟಡ ಕಟ್ಟಿಸುವಲ್ಲಿ ಮುತುವರ್ಜಿ ವಹಿಸಿ, ಉತ್ತಮ ಶಾಲೆಯಾಗಿ ಹಾಗೂ ನಲಿಕಲಿ ಉತ್ತಮವಾಗಿ ನಡೆಯಲು ಕಾರಣಕರ್ತರಾದರು.

2008-09ನೇ ಸಾಲಿನಲ್ಲಿ ಮುಂಡತ್ತೋಡಿ ಶಾಲೆಯಿಂದ ವರ್ಗಾವಣೆಗೊಂಡು, ಒಟ್ಟು 25ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಕನ್ಯಾಡಿ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸಹಶಿಕ್ಷಕರಾಗಿ ಸೇವೆ ಸಲ್ಲಿಸಿ ಜೂ.30ರಂದು ಸೇವಾ ನಿವೃತ್ತಿ ಹೊಂದಿದ್ದಾರೆ.

Related posts

ಬೆದ್ರಬೆಟ್ಟು ಅರಿಫಾಯ್ಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಈದುಲ್‌ ಅಝಾ ಆಚರಣೆ

Suddi Udaya

ಮೂರು ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟದ ಪ್ರಕರಣ ಪತ್ತೆ: ಪಿಕಪ್ ಸಹಿತ ವಾಹನದಲ್ಲಿದ್ದ 6 ದನ, 2 ಗಂಡು ಕರುಗಳು ಸೇರಿ ಒಟ್ಟು 8 ಜಾನುವಾರು ವಶ

Suddi Udaya

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಭಾರಿ ಮಳೆಗೆ ಓಡದಕರಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಗೆ ಹಾಗೂ ಮನೆಗೆ ನುಗ್ಗಿದ ನೀರು

Suddi Udaya

ಶಿಶಿಲ ಗ್ರಾ.ಪಂ. ನಲ್ಲಿ ಭೇಟಿ ಬಚಾವೋ ಭೇಟಿ ಪಡಾವೋ ಅರಿವು ಕಾರ್ಯಕ್ರಮ

Suddi Udaya

ಕೊಕ್ರಾಡಿ ಪದವಿ ಪೂರ್ವ ಕಾಲೇಜಿಗೆ ಶೇ. 97.01 ಫಲಿತಾಂಶ

Suddi Udaya
error: Content is protected !!