37.2 C
ಪುತ್ತೂರು, ಬೆಳ್ತಂಗಡಿ
April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಭ್ಯಾಸ್ ಮತ್ತು ಪೈ ಅಕಾಡೆಮಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾಥಿಗಳಿಗೆ ಪರೀಕ್ಷಾ ಪೂರ್ವಸಿದ್ಧತಾ ತರಬೇತಿ ಕಾರ್ಯಾಗಾರ

ಬೆಳ್ತಂಗಡಿ: ಅಭ್ಯಾಸ್ ಅಕಾಡೆಮಿ ಮತ್ತು ಪೈ ಅಕಾಡೆಮಿ ಬೆಳ್ತಂಗಡಿ ತಾಲೂಕು ಇದರ ಸಹಭಾಗಿತ್ವದಲ್ಲಿ ಅಭ್ಯಾಸ ಅಕಾಡೆಮಿಯಲ್ಲಿ ಬೆಳ್ತಂಗಡಿ ತಾಲೂಕಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಪರೀಕ್ಷಾ ಪೂರ್ವ ಸಿದ್ಧತೆ ತರಬೇತಿ ಕಾರ್ಯಾಗಾರವು ಫೆ. 2 ರಂದು ನಡೆಯಿತು.

ಕಾರ್ಯಾಗಾರವನ್ನು ಸುದ್ದಿ ಉದಯ ಪತ್ರಿಕೆಯ ಉಪ ಸಂಪಾದಕರಾದ ಸಂತೋಷ್ ಪಿ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಮುಂದಿನ ಓದಿನ ಕುರಿತು ಜಾಗ್ರತರಾಗಿರಬೇಕು. ಬದ್ದತೆ ಮತ್ತು ಇಚ್ಛಾಶಕ್ತಿಯಿದ್ದಾಗ ಸಾಧನೆ ಮಾಡಲು ಸಾಧ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡ್ ಲೊಬೋ ವಹಿಸಿ ಮಾತನಾಡಿ ಒಬ್ಬ ಮಾದರಿ ವ್ಯಕ್ತಿಯಾಗಿ ಬೆಳೆಯಲೂ ಒಳ್ಳೆ ಗುರಿ, ವಿದ್ಯೆ ಹಾಗೂ ಬುದ್ದಿ ಅಗತ್ಯ. ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಭವಿಷ್ಯವನ್ನು ಕಟ್ಟಬೇಕು.ಈ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರ ಫಲಪ್ರದವಾಗುತ್ತದೆ ಎಂದರು.

ವೇದಿಕೆಯಲ್ಲಿ ಪೈ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಚೈತ್ರ, ಎಸ್.ಡಿ.ಎಮ್.ಸ್ನಾತಕೋತ್ತರ ಕಾಲೇಜಿನ ನಿವೃತ್ತ ಡೀನ್ ಗಣಪಯ್ಯ ಭಟ್,ಅಭ್ಯಾಸ್ ಸಂಸ್ಥೆಯ ಆಡಳಿತಧಿಕಾರಿ ಪ್ರಮೋದ್ ಗೌಡ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯ ವಾರ್ಡನ್ ಶ್ರೀಮತಿ ಹೇಮಲತಾ ಎಂ.ಉಪಸ್ಥಿತರಿದ್ದರು.

ಅಬ್ಯಾಸ್ ಅಕಾಡೆಮಿಯ ಅಧ್ಯಕ್ಷರಾದ ಕಾರ್ತಿಕೇಯ ಭಟ್ ಸಂಸ್ಥೆಯ ಬಗ್ಗೆ ಮಾತನಾಡಿ ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಗೌಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


120 ವಿದ್ಯಾರ್ಥಿಗಳು ಭಾಗವಹಿಸುವಿಕೆ: ಎಸ್‌.ಎಸ್.ಎಲ್‌.ಸಿ ವಿದ್ಯಾರ್ಥಿಗಳಿಗೆ ನಡೆದ ಕಾರ್ಯಾಗಾರದಲ್ಲಿ ಒಟ್ಟು 120 ವಿದ್ಯಾರ್ಥಿಗಳು ಭಾಗವಹಿಸಿ ತರಭೇತಿಯ ಸದುಪಯೋಗವನ್ನು ಪಡೆದರು.ಪರಿಣಿತ ತರಬೇತುದಾರರಾದ ಶ್ರೀಮತಿ ಚೈತ್ರ, ಶ್ರೀಮತಿ ಸುಮಲತ ಹಾಗೂ ಕಾರ್ತಿಕೇಯ ಭಟ್ ತರಬೇತಿ ನೀಡಿದರು.

Related posts

ಜೂ. 16: ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಿವಿ, ಮೂಗು, ಗಂಟಲು ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ: ಪವರ್ ಆನ್ ನಲ್ಲಿ ದೀಪಾವಳಿ ಹಬ್ಬಗಳ ಪ್ರಯುಕ್ತ ಮೆಗಾ ಸೇಲ್: ಪ್ರತಿ ಖರೀದಿಯ ಮೇಲೆ ಶೇ.10 ರಿಂದ 50 ರಷ್ಟು ರಿಯಾಯಿತಿ,

Suddi Udaya

ಎನ್ನೆಸ್ಸೆಸ್ ರಾಷ್ಟ್ರೀಯ ಭಾವೈಕ್ಯ ಶಿಬಿರಕ್ಕೆ ಸುದರ್ಶನ ನಾಯಕ್ ಆಯ್ಕೆ

Suddi Udaya

ಮುಂಡಾಜೆ ಬಿ ಕಾರ್ಯಕ್ಷೇತ್ರದ ‘ಶ್ರೀ ಲಕ್ಷ್ಮಿ’ ಹೊಸ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನೆ

Suddi Udaya

ಪ್ರಕೃತಿಯ ವಿಸ್ಮಯ: ನಾಳದಲ್ಲಿ ಮಾನವನಂತೆ ಹೋಲುವ ಸೋನೆ(ಣೆ) ಗೆಣಸು

Suddi Udaya

ಧರ್ಮಸ್ಥಳದಲ್ಲಿ 53ನೇ ವರ್ಷದ ಪುರಾಣ ಕಾವ್ಯ ವಾಚನ – ಪ್ರವಚನ ಉದ್ಘಾಟನೆ

Suddi Udaya
error: Content is protected !!