ಬೆಳ್ತಂಗಡಿ : ಕಳಿಯ ಪಂಚಾಯತ್ ಗ್ರಾಮದ 15 ನೇ ಹಣಕಾಸು ಯೋಜನೆ ಸಾಮಾಜಿಕ ಲೆಕ್ಕ ಪರಿಶೋಧನೆ ಫೆ.5 ರಂದು ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಮೆದಿನ ಅಧ್ಯಕ್ಷತೆ ವಹಿಸಿದ್ದರು. ಗೇರುಕಟ್ಟೆ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅಜೀತ್ ಕುಮಾರ್ ಸಭೆಯನ್ನು ನಡೆಸಿಕೊಟ್ಟರು.
ಕಳಿಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಇಂದಿರಾ ಬಿ.ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಕಾರ್ಯದರ್ಶಿ ಕುಂಞ್ಞ ಕೆ, ತಾಲೂಕು ಕಿರಿಯ ಅಭಿಯಂತರ ಗಫೂರು, ನರೇಗ ತಾಂತ್ರಿಕ ಸಹಾಯಕ ಅಭಿಯಂತರ ಶರಣ್ ಕುಮಾರ್ ರೈ, ಬೆಳ್ತಂಗಡಿ ತೋಟಗಾರಿಕೆ ಸಹಾಯಕ ಅಧಿಕಾರಿ ಮಲ್ಲಿನಾಥ ಬಿರದಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಬಗ್ಗೆ ತಾಲೂಕು ಸಾಮಾಜಿಕ ಪರಿಶೋಧನೆಯ ವ್ಯವಸ್ಥಾಪಕ
ರಾಜೀವ್ ಸಾಲ್ಯಾನ್ ಸಭೆಯಲ್ಲಿ ಮಾಹಿತಿಗಳನ್ನು ನೀಡಿದರು.
ಪಂಚಾಯತ್ ಕಾಮಗಾರಿ ಬಗ್ಗೆ ಲೆಕ್ಕಪರಿಶೋಧಕರಾದ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಲಾವಣ್ಯ ಸಭೆಯಲ್ಲಿ ವರದಿ ಮಂಡಿಸಿದರು. 2023-24ನೇ ಸಾಲಿನಲ್ಲಿ ಕಳಿಯ ಗ್ರಾಮ ಪಂಚಾಯತ್ ಗೇರುಕಟ್ಟೆ-ನೆಲ್ಲಿಕಟ್ಟೆ ರಸ್ತೆ ಬದಿ ನೆಡುತೋಪು ನಿರ್ಮಾಣ ಹಾಗೂ ನೆಲ್ಲಿಕಟ್ಚೆ- ಮಲ್ಲೊಟ್ಟು ತಿಳಿಸಿದ ಪರಿಸರದಲ್ಲಿ ನೆಡುತೋಪು ಕಾಮಗಾರಿ ದುರುಪಯೋಗವಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಜಂಟಿ ಸಮಿತಿ ನೇಮಕ ಮಾಡಿ ಸೂಕ್ತ ತನಿಖೆ ಮಾಡಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಕರೀಂ, ಸುಭಾಷಿಣಿ ಕೆ, ಸ್ಥಳೀಯ ಬಾಲಕೃಷ್ಣ ಗೌಡ, ಕೇಶವ ಪೂಜಾರಿ ಒತ್ತಾಯಿಸಿದರು. ಗೇರುಕಟ್ಟೆ ಸಮೀಪದ ಪರಪ್ಪು ಎಂಬಲ್ಲಿ ಮೀನು ಮಾರುಕಟ್ಟೆ ರಚನೆ ಮಾಡಲು ತಾಲೂಕು ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಸುಮಾರು ರೂ. 5 ಲಕ್ಷ ಕ್ಕೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗಿದೆ. ಸರಿಯಾದ ರೀತಿಯಲ್ಲಿ ಸಾರ್ವಜನಿಕರಿಗೆ ಪ್ರಯೋಜನವಿಲ್ಲ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಮಾಜಿ ಅಧ್ಯಕ್ಷ ಕೇಶವ ಪೂಜಾರಿ ಸಭೆಯಲ್ಲಿ ಒತ್ತಾಯಿಸಿದರು.
ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ಮಶಾನದ ಹತ್ತಿರದಲ್ಲಿ ಅಂದಾಜು ರೂ. 2ಲಕ್ಷ ಅನುದಾನದಲ್ಲಿ ಕೊಳವೆ ಬಾವಿಯ ಕೊರೆಯಲಾಗಿದೆ. ನೀರಿನ ಮಟ್ಟ ಕಡಿಮೆ ಇರುವುದರಿಂದ ಪಂಪು ಅಳವಡಿಸದೇ ಅನುದಾನ ನಿರುಪಯುಕ್ತವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ಲೆಕ್ಕಪತ್ರ ಮಂಡಿಸಿದ ರಾಜೀವ್ ಸಾಲಿಯಾನ್, ಪಂಚಾಯತು ಸದಸ್ಯರಾದ ಸುಧಾಕರ ಮಜಲು., ಶ್ರೀಮತಿ ಸುಭಾಷಿಣಿ ಕೆ., ಅಬ್ದುಲ್ ಕರೀಂ ಕೆ.ಎಂ.ಶ್ರೀಮತಿ ಕುಸುಮ.ಎನ್. ಬಂಗೇರ, ಯಶೋಧರ ಶೆಟ್ಟಿ ಕೆ., ವಿಜಯ ಕುಮಾರ್ ಕೆ, ಲತೀಫ್,
ಮೋಹಿನಿ ಹೆಚ್, ಮರೀಟಾ ಪಿಂಟೊ, ಪುಷ್ಪ,ಶ್ವೇತಾ ಶ್ರೀನಿವಾಸ್ ಉಪಸ್ಥಿತರಿದ್ದರು.
ಗೇರುಕಟ್ಟೆ ಹಾಲು ಉ.ಸಂ.ಅಧ್ಯಕ್ಷ ಜನಾರ್ದನ ಗೌಡ ಕೆ, ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆಂರ್ಬುಡ, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಪೂಜಾರಿ , ಮಾಜಿ ಉಪಾಧ್ಯಕ್ಷ ಸತೀಶ್ ನಾಯ್ಕ್, ಕಳಿಯ ಸಿ.ಎ. ಬ್ಯಾಂಕು ನಿರ್ದೇಶಕರು, ಹಾಲು ಉತ್ಪಾದಕರ ಸಂಘದ ನಿರ್ದೇಶಕರು , ಸರಕಾರಿ ಶಾಲಾ ಶಿಕ್ಷಕರು, ಸಾಮಾಜಿಕ ಪರಿಶೋಧನೆ ಸಂಪನ್ಮೂಲ ವ್ಯಕ್ತಿಗಳಾದ ಸುಮಲತಾ, ಸುಚೇತನಾ, ಹರೀಣಿ, ಉಷಾ, ಈಶ್ವರಿ, ದೀಪ್ತಿ ಎಸ್, ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದರು.