ಬೆಳ್ತಂಗಡಿ: ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸೇವಾ ಸಂಘ ಅಗ್ಗಿದ ಕಳಿಯ ಸಸಿಹಿತ್ಲು,ಇದರ ಸುವರ್ಣ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಸುವರ್ಣ ಮಹೋತ್ಸವದ ಸವಿ ನೆನಪಿಗೆ ಕಡಲತಡಿಯ ಗ್ರಾಮದಲ್ಲಿ ವಿಶ್ವ ಬಿಲ್ಲವ, ತೀಯಾ, ಆರ್ಯ ಈಡಿಗರ, ದೀವರ ಹಾಗೂ 26 ಉಪ ಜಾತಿಗಳ ಗಳ ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಾದ ‘ಸುವರ್ಣ ಸಿರಿ 2025’ ಕಾರ್ಯಕ್ರಮದಲ್ಲಿ ಮುಂಡೂರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ತೃತೀಯ ಸ್ಥಾನದೊಂದಿಗೆ ನಗದು ಬಹುಮಾನ ಮತ್ತು ಟ್ರೋಫಿಯನ್ನು ಪಡೆದುಕೊಂಡಿದೆ.
ಸ್ಪರ್ಧೆಯಲ್ಲಿ ಸುಮಾರು 20ಕ್ಕಿಂತಲೂ ಹೆಚ್ಚು ತಂಡಗಳು ಭಾಗವಹಿಸಿದ್ದವು.ಸ್ಮಿತೇಶ್ ಎಸ್ ಬಾರ್ಯ ಈ ಸಾಂಸ್ಕೃತಿಕ ಕಾರ್ಯಕ್ರಮದ ನಿರ್ದೇಶನ ಮಾಡಿದ್ದು, ಚಂದ್ರಹಾಸ ಬಳಂಜ ಸಹಕಾರ ನೀಡಿದ್ದಾರೆ.