ಬೆಳ್ತಂಗಡಿ: ಮೂಲ್ಕಿ ಕೊಲಕಾಡಿ ಒಂಭತ್ತು ಮಾಗಣೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಜೀರ್ಣೋದ್ದಾರದ ವಿಜ್ಞಾಪನ ಪತ್ರವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಗೆ ನೀಡಿ ಸರಕಾರದಿಂದ ಜೀರ್ಣೋದ್ದಾರಕ್ಕೆ ಸಹಕಾರ ನೀಡುವಂತೆ ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸುಬ್ರಾಯ ಆಚಾರ್ಯ, ಆಡಳಿತ ಮೊಕ್ತೇಸರ ಸುಧಾಕರ ಆಚಾರ್ಯ, ಮಂಗಳೂರು ಎಸ್.ಕೆ.ಜಿ. ಗೋಲ್ಡ್ ಸ್ಮಿತ್ ಸೊಸೈಟಿ ನಿರ್ದೇಶಕ ಮಂಜುನಾಥ ಆಚಾರ್ಯ, ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಪ್ರಶಾಂತ್ ಆಚಾರ್ಯ, ಕಾರ್ಯಾಧ್ಯಕ್ಷ ಸುಧೀರ್ ಆಚಾರ್ಯ, ಕಾರ್ಯದರ್ಶಿ ಸತೀಶ್ ಆಚಾರ್ಯ ಉಪಸ್ಥಿತರಿದ್ದರು.