April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಫೆ.7-10: ಶ್ರೀ ಕ್ಷೇತ್ರ ಒಟ್ಲದಲ್ಲಿ ವರ್ಷಾವಧಿ ಜಾತ್ರೋತ್ಸವ

ಶಿಶಿಲ: ಒಟ್ಲ ಶ್ರೀ ಧರ್ಮರಸು ಉಳ್ಳಾಕ್ಲು ಬ್ರಹ್ಮಬೈದೇರುಗಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವವು ಫೆ.7ರಿಂದ ಫೆ.10 ವರೆಗೆ ನಡೆಯಲಿದೆ.


ಫೆ.07 ಬೆಳಿಗ್ಗೆ ಗಣಹೋಮ, ಕಲಶಾಭಿಷೇಕ, ನಾಗತಂಬಿಲ, ಮಾಕಲಬ್ಬೆ ತಂಬಿಲ, ಬ್ರಹ್ಮಬೈದೇರುಗಳ ತಂಬಿಲ, ದೈವಗಳಿಗೆ ತಂಬಿಲ, ಬೆಳಿಗ್ಗೆ ಹಸಿರುವಾಣಿ ಹೊರೆಕಾಣಿಕೆ (ಶಿಶಿಲ, ಶಿವಾಜೆ, ಹತ್ಯಡ್ಕ ಗ್ರಾಮಸ್ಥರಿಂದ) ಫೆ.೦೮ ಬೆಳಿಗ್ಗೆ ತೋರಣ ಮುಹೂರ್ತ, ಧರ್ಮರಸು ಉಳ್ಳಾಕ್ಲು ಮತ್ತು ಪರಿವಾರ ದೈವಗಳ ನೇಮೋತ್ಸವ, ಮಧ್ಯಾಹ್ನ ಕೊಡಮಂದಾಯ ನೇಮ, ಕಲ್ಲಾಜೆಯಿಂದ ಪಿಲಿಕಲ್ತಾಯ ಭಂಡಾರ ಬರುವುದು. ಶಿರಾಡಿ ದೈವ, ಪಂಜುರ್ಲಿ ದೈವಗಳ ಭಂಡಾರ ತೆಗೆಯುವುದು, ಸಂಜೆ ಸತ್ಯ ಜಾವತೆ ನೇಮ, ಕಲ್ಕುಡ ಕಲ್ಲುರ್ಟಿ ನೇಮ, ರಾತ್ರಿ ಲೆಕ್ಕೆಸಿರಿ ಬಾವನ ನೇಮ, ಪರಿವಾರ ದೈವಗಳ ನೇಮ, ಅನ್ನಸಂತರ್ಪಣೆ, ರಾತ್ರಿ 10.30ಕ್ಕೆ ಪಿಲಿಕಲ್ತಾಯ ನೇಮ, ಫೆ. 09 ಉದಯತ್ಪೂರ್ವ 1.30ಕ್ಕೆ ಬಿರ್ಮೆರ್, ಶಿರಾಡಿ ದೈವಂಗಳು ಪರಿವಾರ ನೇಮ (ಜುಮ್ರಾಲಿ), ಬೆಳಿಗ್ಗೆ ೮ಕ್ಕೆ ಪಂಜುರ್ಲಿ, ಮಾಲದ ಕೊರಗ ನೇಮ, ಬೆಳಿಗ್ಗೆ 10ಕ್ಕೆ ಬಚ್ಚನಾಯಕ ಹಾಗೂ ಗುಳಿಗ ನೇಮ, ಸಂಜೆ 5ಕ್ಕೆ ಬೈದೇರುಗಳು ಭಂಡಾರ ತೆಗೆಯುವುದು, ರಾತ್ರಿ ಬೈದೇರುಗಳು ಗರಡಿ ಇಳಿಯುವುದು, ದೇಯಿ ಬೈದಿತಿ ಉತ್ಸವ ಹಾಗೂ ಬೈದೇರುಗಳು ಭೇಟಿ, ಫೆ.10 ಉದಯತ್ಪೂರ್ವ 1.30ಕ್ಕೆ ಮಾನಿಬಾಲೆ ಗರಡಿ ಇಳಿಯುವುದು, ಪ್ರಾತಃಕಾಲ 4.30ಕ್ಕೆ ಸುರಿಯ ಹಾಕುವುದು, ಬೆಳಿಗ್ಗೆ ಹರಿಕೆ ಮತ್ತು ಗಂಧ ಪ್ರಸಾದ ನೀಡಲಾಗುವುದು ಎಂದು ಕ್ಷೇತ್ರದ ಅನುವಂಶೀಯ ಧರ್ಮದರ್ಶಿಗಳಾದ ಜನಾರ್ದನ ಬಂಗೇರ ವಿ ತಿಳಿಸಿದ್ದಾರೆ.


ಸಾಂಸ್ಕೃತಿಕ ಕಾರ್ಯಕ್ರಮ: ಫೆ.09 ಸಂಜೆ ಜೆಸಿ ಕುಶಾಲಪ್ಪ ಸಾರಥ್ಯದ ಬೆಸ್ಟ್ ಡ್ಯಾನ್ಸ್ ಇನ್ಸಿಟ್ಯೂಟ್ ಪ್ರಶಸ್ತಿ ವಿಜೇತ ಸಂಸ್ಥೆ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇವರಿಂದ ನೃತ್ಯ ರೂಪಕ ವೈಭವ ನಡೆಯಲಿದೆ.

Related posts

ಅರಣ್ಯದ ನಡುವೆ ಬಿಟ್ಟು ಹೋದ ಮಾರುತಿ ಕಾರು-ವಾರುಸುದಾರರ ಸುಳಿವಿಲ್ಲ

Suddi Udaya

ತೆಕ್ಕಾರು: ಹೊಸಮೊಗ್ರು ಹೇಮಲತಾ ಕೊಂಡೆ ನಿಧನ

Suddi Udaya

ಉಜಿರೆ ಎಸ್.ಡಿ.ಎಂ ಪ.ಪೂ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

Suddi Udaya

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ‘ಭಾಗವತ ಸಪ್ತಾಹ’

Suddi Udaya

ಮದ್ದಡ್ಕ ಕುದ್ರೆಕಲಗಲ್ಲು ನಿವಾಸಿ ಶ್ರೀಮತಿ ನಿಧನ

Suddi Udaya

ಕುಕ್ಕೇಡಿ ಗ್ರಾ.ಪಂ. ನಲ್ಲಿ ಆರ್ ಟಿ ಸಿ ಗೆ ಆಧಾರ್ ಜೋಡಣಾ ಕಾರ್ಯಕ್ರಮ: ತಹಸೀಲ್ದಾರ್ ಪೃಥ್ವಿ ಸಾನಿಕಾಂ ಭೇಟಿ, ಪರಿಶೀಲನೆ

Suddi Udaya
error: Content is protected !!