ನಿಡ್ಲೆ: ಅಗ್ರಿಲೀಫ್ 2.0 ಇದರ ರೈತರ ಜೊತೆ-ವಿಶ್ವದ ಕಡೆ ವಿಸ್ತೃತ ಘಟಕದ ಉದ್ಘಾಟನಾ ಸಮಾರಂಭವು ಫೆ.8 ರಂದು ನಿಡ್ಲೆ ಅಗ್ರಿಲೀಫ್ ಸಂಸ್ಥೆ, ಬರಂಗಾಯದಲ್ಲಿ ಸಂಜೆ 4.೦೦ ಗಂಟೆಗೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಂಗಳೂರು ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಸತ್ಯನಾರಾಯಣ, ಶಶಿಧರ್ ಶೆಟ್ಟಿ ಬರೋಡಾ, ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರರು ಯು. ಶರತ್ ಕೃಷ್ಣ ಪಡ್ವೆಟ್ನಾಯ, ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ: ರಾತ್ರಿ 7ರಿಂದ ಪ್ರಸಿದ್ಧ ಕಲಾವಿದರಿಂದ ಇಂದ್ರಜಿತು ಕಾಳಗ-ಲವ ಕುಶ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಅಗ್ರಿಲೀಫ್ ಸಂಸ್ಥೆಯ ಸ್ಥಾಪಕ ಅವಿನಾಶ್ ರಾವ್ ಹಾಗೂ ಸಹಸಂಸ್ಥಾಪಕ ಅತಿಶಯ ಎಂ. ಜೈನ್ ತಿಳಿಸಿದ್ದಾರೆ.