26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಕೊಯ್ಯೂರು: ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ಮಕ್ಕಳ ಕುಣಿತ ಭಜನಾ ತಂಡದ ಉದ್ಘಾಟನಾ ಕಾರ್ಯಕ್ರಮ

ಕೊಯ್ಯೂರು: ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿಯ ವತಿಯಿಂದ ಮಕ್ಕಳ ಕುಣಿತ ಭಜನಾ ತಂಡದ ಉದ್ಘಾಟನಾ ಕಾರ್ಯಕ್ರಮವು ಮಾ.3ರಂದು ನಡೆಯಿತು.

ಈ ತರಬೇತಿಯ ಉದ್ಘಾಟನೆಯನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಬಿ ಹರಿಶ್ಚಂದ್ರ ಬಲ್ಲಾಳ್ ಇವರು ದೀಪ ಪ್ರಜ್ವಲಿಸುವ ಮೂಲಕ ನೆರವೇರಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕರಾದ ಅಶೋಕ್ ಕುಮಾರ್ ಭಾಗಿಣ್ಣಾಯ, ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ ನ ಕಾರ್ಯದರ್ಶಿ ಪಿ ಚಂದ್ರಶೇಖರ ಸಾಲಿಯಾನ್, ಸನಾತನ ಸಂಸ್ಥೆಯ ಧರ್ಮ ಪ್ರಚಾರಕಿ ಶ್ರೀಮತಿ ಶಾರದಾ ಭಂಡಾರ್ಕರ್, ಭಜನಾ ತರಬೇತುದಾರರಾದ ಹರೀಶ್ ನೆರಿಯ ಇವರುಗಳು ಭಜನೆಯ ಮಹತ್ವದ ಬಗ್ಗೆ ಹಾಗೂ ಮಕ್ಕಳು ಭಜನೆಗೆ ಬರುವಲ್ಲಿ ಮಕ್ಕಳ ಪೋಷಕರ ಪಾತ್ರದ ಬಗ್ಗೆ ತಿಳಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷರಾದ ದಿನೇಶ್ ಜಾಲ್ನಪ್ಪು, ಕಾರ್ಯದರ್ಶಿ ನಾರಾಯಣ ಪೂಜಾರಿ ಗುರ್ಬೋಟ್ಟು, ದುರ್ಗಾಪರಮೇಶ್ವರಿ ಭಜನಾ ಮಂಡಳಿ ಚಂದ್ಕೂರು ಇಲ್ಲಿಯ ತರಬೇತುದಾರರುಗಳಾದ ಅಖಿಲೇಶ್, ದೀಕ್ಷಾ, ವಿನೀತ್, ಪ್ರೀತಿ, ದೀಕ್ಷಿತ್ ಗ್ರಾ ಪಂ ಸದಸ್ಯ ಯಶವಂತ ಗೌಡ ಪೂರ್ಯಳ, ಶ್ರೀ ಕೃಷ್ಣ ಮಹಿಳಾ ಭಜನಾ ಮಂಡಳಿ ಆದುರುಪೇರಲ್ ಇಲ್ಲಿನ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಜೇಕ್ಕಿನಡ್ಕ, ಹಾಗೂ ನಮ್ಮ ಭಜನಾ ಮಂಡಳಿ ಮಾಜಿ ಅಧ್ಯಕ್ಷ /ಕಾರ್ಯದರ್ಶಿ ಮತ್ತು ಸದಸ್ಯರು ಹಾಗೂ ಭಜಕ ಮಕ್ಕಳು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಯಶವಂತ ಗೌಡ ಪೂರ್ಯಾಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದಿನೇಶ್ ಗೌಡ ಜಾಲ್ನಪ್ಪು ವಂದಿಸಿದರು.

Related posts

ಪರಪ್ಪು ಮಸೀದಿಯಲ್ಲಿ ಸಂಭ್ರಮದ ಈದ್-ಉಲ್-ಫಿತರ್ ಆಚರಣೆ

Suddi Udaya

ಕೊಕ್ಕಡ: ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ “ಶ್ರೀ ಲಲಿತಾ ಸಹಸ್ರನಾಮ ಯಾಗ: ಧಾರ್ಮಿಕ ಸಭೆ, ಸನ್ಮಾನ

Suddi Udaya

ಗರ್ಡಾಡಿ ನಂದಿಬೆಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಬೆಳ್ತಂಗಡಿ: ಎಸ್.ಡಿ.ಪಿ.ಐ 17ನೇ ಸಂಸ್ಥಾಪನಾ ದಿನಾಚರಣೆ

Suddi Udaya

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ 25 ಸಾವಿರ ಸಹಾಯಧನ ವಿತರಣೆ

Suddi Udaya
error: Content is protected !!