ಪಡಂಗಡಿ : ಪಡಂಗಡಿ ಮಲ್ಲಿಪ್ಪಾಡಿ ಶ್ರೀ ಸದಾಶಿವ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ಶನಿ ಪೂಜೆ ಫೆ.10 ರಂದು ಮುಂಡೂರು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ7 ಕ್ಕೆ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಗೊನೆ ಮುಹೂರ್ತ, ಉಗ್ರಾಣ ಮುಹೂರ್ತ, ಸ್ವಸ್ತಿ ಪುಣ್ಯಾಹ ವಾಚನ, ಗಣಪತಿ ಹೋಮ, ಪ್ರಧಾನ ಹೋಮ, ಪಂಚವಿAಶತಿ ಕಲಶ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ದೈವಗಳಿಗೆ, ನಾಗದೇವರಿಗೆ ಕಲಶಾಭಿಷೇಕ, ತಂಬಿಲ, ಪಂಚಪರ್ವ, ಬೆಳಿಗ್ಗೆ ೮ಕ್ಕೆ ಸಾಮೂಹಿಕ ಶ್ರೀ ಶನಿಪೂಜೆ ಪ್ರಾರಂಭ, ಮಧ್ಯಾಹ್ನ 12.30ಕ್ಕೆ ಶ್ರೀ ಸದಾಶಿವ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ. ಸಂಜೆ 6ರಿಂದ 7ವರೆಗೆ ಭಜನಾ ಕಾರ್ಯಕ್ರಮ ಮಲ್ಲಿಪ್ಪಾಡಿ ಶ್ರೀ ಸದಾಶಿವ ಭಜನಾ ಮಂಡಳಿ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ, ತೆಂಕಕಾರಂದೂರು ಸದಸ್ಯರಿಂದ ಕುಣಿತ ಭಜನೆ, ಸಂಜೆ 7ಕ್ಕೆ ಕಾರ್ತಿಕ ಪೂಜೆ, ರಂಗಪೂಜೆ, ದೇವರ ಬಲಿ ಉತ್ಸವ, ರಾಜಾಂಗಣದಲ್ಲಿ ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ ರಾತ್ರಿ 8ರಿಂದ ಮೂಜಿಲ್ನಾಯ, ಪಿಲಿಚಾಮುಂಡಿ, ಪಂಜುರ್ಲಿ, ಭೈರವ, ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಫೆ.11 ಬೆಳಿಗ್ಗೆ 8ಕ್ಕೆ ಸಂಪ್ರೋಕ್ಷಣೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರರು ಅಮರನಾಥ ಹೆಗ್ಡೆ ತಿಳಿಸಿದ್ದಾರೆ.