ಕಾಕ೯ಳ: ಫೆ.6 ರಂದು ಕಾರ್ಕಳ ಪ್ರವಾಸಿ ಮಂದಿರದ ವಠಾರದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಉಡುಪಿ ಇವರ ವತಿಯಿಂದ 36ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಜರಗಿತು. ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಕಛೇರಿಯ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಸಂತೋಷ್ ಶೆಟ್ಟಿಯವರು ರಸ್ತೆ ಸುರಕ್ಷೆ ಹಾಗೂ ವಾಹನ ಚಾಲಕರು ಪಾಲಿಸಬೇಕಾದ ನಿಯಮಗಳನ್ನು ಸಭೆಗೆ ತಿಳಿಸಿದರು, ಹಾಗೂ ಚಿಕ್ಕ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವ ಸಂಧರ್ಭದಲ್ಲಿ ಕಡ್ಡಾಯವಾಗಿ ಸುರಕ್ಷತಾ ಬೆನ್ನು ಉಪಯೋಗಿಸುವ ಸಲಹೆ ನೀಡಿದರು.
ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಇಂತಹ ಅರಿವು ಮೂಡಿಸುವಂತಹ ಕಾರ್ಯಕ್ರಮಗಳ ಅಗತ್ಯವನ್ನು ತಿಳಿಸಿದರು. ವೇದಿಕೆಯಲ್ಲಿ ನೇಮಿರಾಜ ಆರಿಗ ಪ್ರಾಂಶುಪಾಲರು, ಶ್ರೀ ಮಹಾವೀರ ಡ್ರೈವಿಂಗ್ ಸ್ಕೂಲ್, ಗೋಪಾಲ ಪೈ ಪ್ರಾಂಶುಪಾಲರು, ವಿವೇಕ್ ಡ್ರೈವಿಂಗ್ ಸ್ಕೂಲ್, ಶಿವರಾಮ ಹೆಗ್ಡೆ ಪ್ರಾಂಶುಪಾಲರು, ಗುಡ್ ಲಕ್ ಡ್ರೈವಿಂಗ್ ಸ್ಕೂಲ್ ಮಂಜುನಾಥ ಅಧ್ಯಾಪಕರು ಆಳ್ವಾಸ್ ಕಾಲೇಜ್ ಮೂಡಬಿದ್ರೆ, ಹಾಗೂ ಎಲ್ಲಾ ವಾಹನ ಚಾಲಕರು ಹಾಗೂ ಮಾಲಕರು, ಹಾಗೂ ಡ್ರೈವಿಂಗ್ ಸ್ಕೂಲ್ ಪ್ರಾಂಶುಪಾಲರು ಹಾಜರಿದ್ದರು. ಅಂಬಾಪ್ರಸಾದ್ ಪ್ರಾಂಶುಪಾಲರು, ಅಂಬಾ ಡ್ರೈವಿಂಗ್ ಸ್ಕೂಲ್ ಇವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.