September 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ದಿಡುಪೆ: ಕಾರು ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಬೆಳ್ತಂಗಡಿ: ಕಾರು ಅಪಘಾತವಾಗಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ದಿಡುಪೆ ಬಳಿ ಫೆ.5ರಂದು ನಡೆದಿದೆ.

ಮೃತರನ್ನು ಕುಕ್ಕಾವು ನಿವಾಸಿ ಪುತ್ತಾಕ (ಇಬ್ರಾಹಿಂ)(67ವ) ಎಂದು ಗುರುತಿಸಲಾಗಿದೆ.

ಇವರು ಸಹೋದರನಾವುಮನೆಯ ಶುಭ ಕಾರ್ಯ ನಿಮಿತ್ತ ಮಾತುಕತೆಗಾಗಿ ಬಂಧುಗಳು ಜೊತೆಯಾಗಿ ದಿಡುಪೆಗೆ ಹೋಗಿದ್ದರು. ಕಾರಿನಿಂದ ಇಳಿದು ಮುಂದಕ್ಕೆ ಚಲಿಸುತ್ತಿದ್ದಂತೆ ಹಠಾತ್ತನೆ ಕಾರು ಮುಂದಕ್ಕೆ ಚಲಿಸಿ ಈ ಅವಘಡ ಸಂಭವಿಸಿದೆ. ಹಕೀಂ ಎಂಬವರು ವಾಹನ ಚಲಾಯಿಸುತ್ತಿದ್ದರೆಂದು ತಿಳಿದು ಬಂದಿದ್ದು ಅವರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಪುತ್ತಾಕ ಅವರನ್ನು
ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ಅಸುನೀಗಿದ್ದಾರೆ.

ಮೃತರು ಪತ್ನಿ ರುಕ್ಯಾ, ಮಕ್ಕಳಾದ ರಫೀಕ್, ಝುಬೈದಾ ಮತ್ತು ಮಜೀದ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರ ಗುರುವಾರ ಕಾಜೂರಿನ ದಫನ ಭೂಮಿಯಲ್ಲಿ ನಡೆಯಿತು.

Related posts

ಪಿಯುಸಿ ಫಲಿತಾಂಶ: ಶ್ರೀದೇವಿ ಕಲಾ ವಿಭಾಗದಲ್ಲಿ ವಾಣಿ ಕಾಲೇಜಿಗೆ ಪ್ರಥಮ

Suddi Udaya

ಬೆಳ್ತಂಗಡಿ ಎಸ್‌ಸಿಡಿಸಿಸಿ ಬ್ಯಾಂಕ್ ಬೆಳ್ತಂಗಡಿ ಶಾಖಾ ಕಟ್ಟಡದಲ್ಲಿ ಹೊಸ ಎಟಿಎಂ ಹಾಗೂ ಲಿಫ್ಟ್ ಉದ್ಘಾಟನೆ

Suddi Udaya

ವೇಣೂರು: ಜೀರ್ಣೋದ್ಧಾರಗೊಳಿಸಿದ ತ್ಯಾಗಿಭವನ ಉದ್ಘಾಟನೆ

Suddi Udaya

ಉಜಿರೆ ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ನಗಬೇಕು ಆಗಾಗ ಬದುಕಿನೊಳಗೆ’ ತರಬೇತಿ ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳು ರೂರಲ್ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಪ.ಪಂ. ವತಿಯಿಂದ ಸರಕಾರದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

Suddi Udaya
error: Content is protected !!