ವೇಣೂರು: ವೇಣೂರು ಕೆಥೋಲಿಕ್ ಬ್ಯಾಂಕ್ ಲೋನ್ ಕಟ್ಟುವ ಸಲುವಾಗಿ ಅಡಿಕೆ ಮಾರಾಟ ಮಾಡಿ ಮನೆಯಲ್ಲಿ ಇಟ್ಟಿದ್ದ ರೂ 2.25 ಲಕ್ಷ ನಗದು ಹಣವು ಕಳವುವಾಗಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಫೆ.5 ರಂದು ದೂರು ದಾಖಲಾಗಿದೆ.
ಘಟನೆ ವಿವರ: ಪೆರ್ಮುಡ ನಿವಾಸಿ ಪ್ರಭಾಕರ ರವರು ವೇಣೂರು ಕೆಥೋಲಿಕ್ ಬ್ಯಾಂಕ್ ಲೋನ್ ಕಟ್ಟುವ ಸಲುವಾಗಿ ಅಡಿಕೆ ಮಾರಾಟ ಮಾಡಿ ಬಂದ ರೂ 2.25 ಲಕ್ಷ ನಗದು ಹಣವನ್ನು ತನ್ನ ಮನೆಯಾದ ನಿಟ್ಟಡೆ ಗ್ರಾಮದ ಪೆರ್ಮುಡ ಉದಯಸದನ ಮನೆ ಎಂಬಲ್ಲಿ ಬೆಡ್ ರೂಮ್ ಒಂದರ ಸೆಲ್ಫ್ ನಲ್ಲಿ ಚಾಪೆ ಅಡಿಯಲ್ಲಿ ಇಟ್ಟಿದ್ದರು.ಸದ್ರಿ ಹಣವನ್ನು ಪ್ರಭಾಕರ ರವರು ಫೆ.03 ರಂದು ಬೆಳಿಗ್ಗೆ ನೋಡಿದ್ದರು. ಆದರೆ ಅದೇ ದಿನ ಸಂಜೆ ನೋಡಿದಾಗ ಹಣವು ಕಾಣೆಯಾಗಿರುತ್ತದೆ.
ಪ್ರಭಾಕರ ಅಡಿಕೆ ಮಾರಾಟ ಮಾಡಿರುವ ವಿಚಾರ ನೆರೆಮನೆಯ ವಿಜಯ ಮೋನಿಸ್ ಎಂಬಾತನಿಗೆ ತಿಳಿದಿರುತ್ತದೆ. ಫೆ. 03 ರಂದು ವಿಜಯ ಮೋನಿಸ್ ಪ್ರಭಾಕರ ರವರ ಮನೆಗೆ ಬಂದು ಹೋಗಿದ್ದರು.
ಪ್ರಭಾಕರ ರವರು ಕಾಣೆಯಾದ ಹಣದ ಬಗ್ಗೆ ಮನೆಯಲ್ಲಿ ಹುಡುಕಾಡಿ ಮನೆಗೆ ಬಂದಿದ್ದ ವಿಜಯ ಮೋನಿಸ್ ನನ್ನು ವಿಚಾರಿಸಿ ಹಣ ಪತ್ತೆಯಾಗದೇ ಇರುವುದರಿಂದ ಇದೀಗ ವೇಣೂರು ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಕಾಣೆಯಾದ ಹಣವನ್ನು ವಿಜಯ ಮೋನಿಸ್ ಎಂಬಾತನೇ ತೆಗೆದಿರಬಹುದು ಎಂಬ ಬಗ್ಗೆ ಬಲವಾದ ಸಂಶಯ ವ್ಯಕ್ತಪಡಿಸಿದ್ದಾರೆ . ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.