April 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಣಿಯೂರು ಗ್ರಾಮ ಪಂಚಾಯತ್ ನಲ್ಲಿ ವಿಕಲ ಚೇತನ ವಿಶೇಷ ಗ್ರಾಮ ಸಭೆ

ಕಣಿಯೂರು : 2024 25ನೇ ಸಾಲಿನ ವಿಕಲ ಚೇತನ ವಿಶೇಷ ಗ್ರಾಮ ಸಭೆಯು ಸರ್ಕಾರದ ಆದೇಶದಂತೆ ಫೆ.07 ರಂದು ಕಣಿಯೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಳ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು,

2024-25ನೇ ಸಾಲಿನ ವಿಕಲಚೇತನರ ವಾರ್ಷಿಕ ವರದಿಯನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಚಿರಂಜೀವಿ ಶೆಟ್ಟಿ ಇವರು ವಾಚಿಸಿದರು,
ವಿಕಲಚೇತನರಿಗೆ ವಿಕಲಚೇತನ ಇಲಾಖೆ ಹಾಗೂ ಎಲ್ಲಾ ಇಲಾಖೆಗಳಿಂದ ಸಿಗುವ ಸರಕಾರದ ಸೌಲಭ್ಯದ ಸಮಗ್ರ ಮಾಹಿತಿಯನ್ನು ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಜೋನ್‌ ಬ್ಯಾಪ್ಟಿಸ್ಟ್ ಡಿಸೋಜ‌ ನೀಡಿದರು.


ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಪಂಚಾಯತಿಯಿಂದ ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು ಮತ್ತು ಪ್ರಸಕ್ತ ಸಾಲಿನಲ್ಲಿ 02 ಜನ ವಿಕಲಚೇತನರಿಗೆ ವಾಟರ್ ಮತ್ತು ಕಮೊಡೋ ಹಸ್ತಂತರಿಸಲಾಯಿತು, ಹಾಗೂ ಎಲ್ಲಾ ವಿಶೇಷ ಚೇತನ ಬಂಧುಗಳಿಗೆ ರೈತ ಭಂಧು ಮಾರುತಿಪುರ ಕಣಿಯೂರು ಇವರು 5g ಯಂತೆ ಅಕ್ಕಿ ಕಿಟ್ ನೀಡಿ ಸಹಕರಿಸಿರುತ್ತಾರೆ, ಹಾಗೆ ಎಲ್ಲಾ ವಿಶೇಷ ಚೇತನ ಬಂಧುಗಳಿಗೆ ನೆರೆದಿರುವ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಮಾಜಿ ಸದಸ್ಯರು ಆದ ಶುಕೂರ್ ಇವರು ನೀಡಿ ಸಹಕರಿಸಿರುತ್ತಾರೆ,

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗೀತಾ ಆರ್ ಸಾಲಿಯಾನ್, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಜಾನಕಿ , ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಗಾಯತ್ರಿ , ಪಂಚಾಯತ್ ಸದಸ್ಯರಾದ ಉಮಾವತಿ ,ಸುಮತಿ,
ಮತ್ತು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಆದ ರಾಧಿಕಾ ಇಲಂತಿಲ ಗ್ರಾಮ ಪಂಚಾಯತ್ ಕೀರ್ಥನ್ ಕೊಯ್ಯುರು, ಗ್ರಾಮ ಪಂಚಾಯತ್ ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಪಂಚಾಯತ್ ಕಾರ್ಯದರ್ಶಿ ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

Related posts

ಮಲವಂತಿಗೆ: ದಿಡುಪೆ ನಿವಾಸಿ ಶ್ರೀಮತಿ ಸಾವಿತ್ರಿ ಮರಾಠೆ ನಿಧನ

Suddi Udaya

ಎಸ್.ಡಿ.ಎಂ ಕಾಲೇಜಿನಲ್ಲಿ ಕಲಾನುಸಂಧಾನ ಶಿಬಿರ

Suddi Udaya

ಓಡಿಲ್ನಾಳ: ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾರದೋತ್ಸವ: ಧಾರ್ಮಿಕ ಸಭೆ

Suddi Udaya

ಉರುವಾಲು ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜೇನು ಕೃಷಿ ತರಬೇತಿ

Suddi Udaya

ಅಳದಂಗಡಿಯಲ್ಲಿ ಲೋಕೋಪಯೋಗಿ ಇಲಾಖೆಯವರು ಅಳವಡಿಸಿದ ನಾಮಫಲಕದಲ್ಲಿ ಗೊಂದಲ

Suddi Udaya
error: Content is protected !!