ಕೊರಿಂಜ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜ ಇಲ್ಲಿಯ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಭಜನಾ ಕಾರ್ಯಕ್ರಮವನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ ಇವರು ದೀಪ ಪ್ರಜ್ವಲಿಸುವ ಮುಖಾಂತರ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಗೌಡ ಅಣವು, ಕಾರ್ಯದರ್ಶಿ ಶ್ರೀಮತಿ ಕೇಶವತಿ ,ಜೊತೆ ಕಾರ್ಯದರ್ಶಿ ಗಣೇಶ ಗೌಡ ಬನಾರಿ, ಆಡಳಿತ ಸಮಿತಿ ಸದಸ್ಯರಾದ ಜನಾರ್ಧನ ಗೌಡ ನಾಕಾಲು, ಸೇಸಪ್ಪ ರೈ ಕೊರಿಂಜ, ಲಿಂಗಪ್ಪ ನಾಯ್ಕ ಮುರತ್ತಕೋಡಿ, ಸುನೀಲ್ ಗೌಡ ಅಣವು,ಸುಂದರ ಪೂಜಾರಿ ಬೆದ್ರಮಜಲು ಮತ್ತು ಗೋಪಾಲಕೃಷ್ಣ ಗೌಡ ನೀನಿ ಹಾಜರಿದ್ದರು. ಕಾರ್ಯಕ್ರಮವನ್ನು ಸೀತಾರಾಮ ಆಳ್ವ ಕೊರಿಂಜ ನಿರೂಪಿಸಿದರು.