23 C
ಪುತ್ತೂರು, ಬೆಳ್ತಂಗಡಿ
February 7, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ಬೆಳ್ತಂಗಡಿವರದಿ

ಬೆಳ್ತಂಗಡಿ: ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

ಬೆಳ್ತಂಗಡಿ: ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ.

ಸುಳ್ಯ ತಾಲೂಕಿನ ತೊಡಿಕಾನದ ಅಂಡ್ಯಡ್ಕ ನಿವಾಸಿ ರಾಜ(64) ಶಿಕ್ಷೆಗೆ ಒಳಗಾದ ಆರೋಪಿ. ಕಮಲಾ ಕೊಲೆಯಾದ ಮಹಿಳೆ.
ರಾಜ ತನ್ನ ಪತ್ನಿ ಕಮಲಾ ಜೊತೆ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಾ ಇರುತ್ತಿದ್ದ. ದಿನಾಂಕ: 04-09-2022 ರಂದು ರಾಜ ಮತ್ತು ಪತ್ನಿ ಕಮಲಾರವರು ರಬ್ಬರ್ ಟ್ಯಾಪಿಂಗ್ ಕೆಲಸ ಕೇಳುತ್ತಾ ಬೆಳ್ತಂಗಡಿ ಕೊಯ್ಯೂರು ಗ್ರಾಮದ ಅಲೆಕ್ಕಿ ಎಂಬಲ್ಲಿನ ಧರ್ಣಪ್ಪ ಗೌಡ ನೇಯವರ ಮನೆಗೆ ತೆರಳಿ ಕೆಲಸ ಕೇಳಿದಾಗ ಧರ್ಣಪ್ಪ ಗೌಡ ರಬ್ಬರ್ ಟ್ಯಾಪಿಂಗ್ ಕೆಲಸ ನೀಡಲು ಒಪ್ಪಿ ಅವರ ಬಾಬು ರಬ್ಬರ್ ತೋಟದಲ್ಲಿರುವ ಶೆಡ್‌ ತರಹದ ಮನೆಯಲ್ಲಿ ಉಳಿಯಲು ಅವಕಾಶ ನೀಡಿರುತ್ತಾರೆ. ರಾಜ ತನ್ನ ಹೆಂಡತಿ ಕಮಲಾರವರ ಜೊತೆ ವಾಸವಿದ್ದ ಆ ಶೆಡ್‌ನಲ್ಲಿ ದಿನಾಂಕ: 06-09-2022 ರಂದು ಸಂಜೆ 5.30 ರ ಬಳಿಕ ರಾಜ ತನ್ನ ಹೆಂಡತಿ ಕಮಲಾಳ ಜೊತೆ ಎಂದಿನಂತೆ ಕ್ಷುಲಕ್ಕ ಕಾರಣಕ್ಕೆ ಜಗಳ ಮಾಡಿದ್ದು, ಜಗಳ ಮುಂದುವರಿದು ರಾತ್ರಿ 8.00 ಗಂಟೆಯ ಸಮಯಕ್ಕೆ ರಾಜ ಕೋಪದಿಂದ ತನ್ನ ಹೆಂಡತಿ ಕಮಲಾಳ ಕುತ್ತಿಗೆಯನ್ನು ಒತ್ತಿ ಹಿಡಿದಾಗ ಕೆಳಕ್ಕೆ ನೆಲಕ್ಕೆ ಬಿದ್ದಿದ್ದು, ಆ ವೇಳೆಗೆ ರಾಜ, ಕಮಲಾ ರವರ ತಲೆಯನ್ನು ನೆಲಕ್ಕೆ ಜೋರಾಗಿ ಗುದ್ದಿ ಬಳಿಕ ತನ್ನ ಲುಂಗಿಯೊಂದನ್ನು ಹರಿದು ಹಗ್ಗದ ರೀತಿ ಮಾಡಿ ಅದರಿಂದ ಕಮಲಾ ರವರ ಕುತ್ತಿಗೆಗೆ ಬಿಗಿದ ಪರಿಣಾಮ ಕಮಲಾರವರು ಮೃತಪಟ್ಟಿದ್ದರು. ನಂತರ ಆರೋಪಿ ಕಮಲಾರವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ರೀತಿ ಬಿಂಬಿಸಿ ಜಾಗದ ಮಾಲೀಕರಾದ ಧರ್ಣಪ್ಪ ಗೌಡರ ಮಗ ಪ್ರಮೋದ್ ರವರಿಗೆ ತಿಳಿಸಿದ್ದಾನೆ.

ಅದರಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣದ ಬಗ್ಗೆ ದೂರು ನೀಡಿದ ಪ್ರಕಾರ ಪ್ರಕರಣ ದಾಖಲಾಗಿ ಕಮಲಾ ಅವರ ಶವ ಪರೀಕ್ಷೆಯನ್ನು ದೇರಳಕಟ್ಟೆಯ ವೈದ್ಯಾಧಿಕಾರಿಯವರಾದ ಡಾ. ವರ್ಷಾ ಶೆಟ್ಟಿಯವರು ನಡೆಸಿದಾಗ ಇದೊಂದು ಕೊಲೆ ಪ್ರಕರಣವೆಂದು ಶವ ಪರೀಕ್ಷಾ ವರದಿಯನ್ನು ನೀಡಿದ ಮೇರೆಗೆ ಆರೋಪಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಠಾಣಾ ಮೊ.ನಂ 56/2022 ರಲ್ಲಿ ಪ್ರಕರಣವು ದಾಖಲಾಗಿದ್ದು, ಪ್ರಾಥಮಿಕ ತನಿಖೆಯನ್ನು ಅಂದಿನ ಪೊಲೀಸ್ ಉಪ ನಿರೀಕ್ಷಕರಾದ ನಂದ ಕುಮಾರ್ ಎಮ್.ಎಮ್ ರವರು ನಡೆಸಿದ್ದು ನಂತರ ಪೂರ್ಣ ಪ್ರಮಾಣದ ತನಿಖೆಯನ್ನು ಅಂದಿನ ಬೆಳ್ತಂಗಡಿ ಪೊಲೀಸ್ ಠಾಣೆಯ ನಿರೀಕ್ಷಕರಾದ ಶಿವ ಕುಮಾರ್ ಬಿ ರವರು ಪೂರ್ಣಗೊಳಿಸಿ ಆರೋಪಿಯ ವಿರುದ್ಧ ಕಲಂ 302 ಐಪಿಸಿ ರಂತೆ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.


ಈ ಪ್ರಕರಣದ ಘಟನೆಯು 06-09-2022 ರಂದು ನಡೆದಿದ್ದು ಪ್ರಾಥಮಿಕವಾಗಿ ಇದೊಂದು ಆತ್ಮಹತ್ಯೆ ಪ್ರಕರಣವೆಂದು ದಾಖಲಾಗಿದ್ದು ದಿನಾಂಕ: 07-09-2022 ರಂದು ಮೃತೆ ಕಮಲಾ ರವರ ಮೃತದೇಹದ ವೈದ್ಯಾಕೀಯ ಶವ ಪರೀಕ್ಷೆಯನ್ನು ನಡೆಸಿದ ಜಸ್ಟಿಸ್ ಕೆ ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿ ” ಡಾ. ವರ್ಷಾ ಎ ಶೆಟ್ಟಿ ಯವರು ಕಮಲಾರವರು ಆತ್ಮಹತ್ಯೆಯಿಂದ ಮೃತಪಟ್ಟಿರುವುದಿಲ್ಲ. ಬದಲಾಗಿ ಅವರನ್ನು ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಲಾಗಿದೆ ಎಂದು ವೈದ್ಯಕೀಯ ಶವ ಪರೀಕ್ಷೆಯ ವರದಿಯನ್ನು ನೀಡಿದ ಮೇರೆಗೆ 10-09-2022 ರಂದು ಕೊಲೆ ಪ್ರಕರಣವು ದಾಖಲಾಗಿರುತ್ತದೆ. ಅದೇ ರೀತಿ ಸದ್ರಿ ವೈದ್ಯಾಧಿಕಾರಿಯವರು ಮಾನ್ಯ ನ್ಯಾಯಾಲಯದಲ್ಲಿ ಅವರು ನೀಡಿದ ಶವ ಪರೀಕ್ಷಾ ವರದಿಗೆ ಪೂರಕವಾಗಿ ಸಾಕ್ಷಿ ನುಡಿದಿರುತ್ತಾರೆ. ಈ ಪ್ರಕರಣದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದೇ ಇರುವುದರಿಂದ ಆರೋಪಿಯ ವಿರುದ್ಧದ ಆರೋಪವನ್ನು ವೈದ್ಯಕೀಯ ಸಾಕ್ಷ್ಯದ ಸಹಾಯದಿಂದ ರುಜುವಾತು ಮಾಡಲಾಗಿರುತ್ತದೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಎಲ್ಲಾ ಸಾಕ್ಷಿದಾರರ ವಿಚಾರಣೆಯನ್ನು ಸರ್ಕಾರಿ ಅಭಿಯೋಜಕರಾದ ಮೋಹನ್ ಕುಮಾರ್.ಬಿ ರವರು ನಡೆಸಿ ವಾದ ಮಂಡಿಸಿರುತ್ತಾರೆ.


ಈ ಪ್ರಕರಣದಲ್ಲಿ ಸಂಪೂರ್ಣ ತನಿಖೆಯನ್ನು ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರಾಗಿದ್ದ ಶಿವ ಕುಮಾರ್ ಬಿ ರವರು ನಡೆಸಿದ್ದು ದೋಷಾರೋಪಣಾ ಪತ್ರವನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ. ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಮೋಹನ್ ಕುಮಾರ್ ಅವರು ವಾಧಿಸಿರುತ್ತಾರೆ. ಪ್ರಕರಣದಲ್ಲಿ ದಾಖಲಾದ ಯುಡಿಆರ್ ಪ್ರಕರಣದಲ್ಲಿ ಪಿ ಎಸ್ಐ ನಂದಕುಮಾರ್ ಅವರು ತನಿಖೆ ನಡೆಸಿ ವೈದ್ಯರಿಂದ ಶವ ಪರೀಕ್ಷಾ ವರದಿ ಪಡೆದುಕೊಂಡು ಕಲಂ ಅನ್ನು ಪರಿವರ್ತಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ ಮಾಡಿ ತನಿಖೆಗೆ ಸಹಕರಿಸಿರುತ್ತಾರೆ. ಬೆಳ್ತಂಗಡಿ ಠಾಣಾ ಹೆಚ್ ಸಿ 741 ವಿಶ್ವನಾಥ್ ಮತ್ತು ಪಿಸಿ 2466 ಬಸವರಾಜು ರವರು ಆರೊಪಿ ಪತ್ತೆಗೆ ಪಿ ಎಸೈರವರಿಗೆ ಸಹಕರಿಸಿರುತ್ತಾರೆ. ಪ್ರಕರಣದಲ್ಲಿತನಿಖಾ ಸಹಾಯಕರಾಗಿ ವಿಜಯ್‌ ಕುಮಾರ್‌ ರೈ ಸಿಹೆಚ್‌ಸಿ 301 ಬೆಳ್ತಂಗಡಿ ಗ್ರಾಮಾಂತರ ವೃತ್ತ ಕಛೇರಿ, ಹಾಗೂ ಸುನೀತಾ , ಮಹೆಚ್ ಸಿ 907 ಬೆಳ್ತಂಗಡಿ ಪೊಲೀಸ್ ಠಾಣೆ ರವರು ಸಹಕರಿಸಿರುತ್ತಾರೆ. ಮಾನ್ಯ ನ್ಯಾಯಾಲಯದಲ್ಲಿ ಕರ್ತವ್ಯದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಪಿಸಿ2406 ವಿನಯ ಪ್ರಸನ್ನ ಮತ್ತು ಪಿಸಿ 2464 ಜಗದೀಶ್ ರವರು ಸಹಕರಿಸಿರುತ್ತರೆ.

Related posts

ಕೊಕ್ಕಡ: ಪಲಸ್ತಡ್ಕ ರಕ್ಷಿತಾರಣ್ಯದಿಂದ ಮರ ಕಳವು ಭೇದಿಸಿದ ಅರಣ್ಯ ಇಲಾಖೆ: ಬಂಧಿಸಲಾಗಿದ್ದ ಆರೋಪಿ ಪ್ರಕಾಶ್ ಜಾಮೀನು ಮೇಲೆ ಬಿಡುಗಡೆ

Suddi Udaya

ಸೌತಡ್ಕ ದೇವಸ್ಥಾನದಲ್ಲಿ ಪುಷ್ಕರಣಿ ಕೆರೆ, ರಕ್ತೇಶ್ವರಿ ಗುಡಿ, ನಾಗಾಲಯಕ್ಕೆ ಶಿಲಾನ್ಯಾಸ

Suddi Udaya

ಬೆಳ್ತಂಗಡಿ: ಲಕ್ಷ್ಮೀ ಕಾಂಪ್ಲೆಕ್ಸ್‌ನಲ್ಲಿ ಮಂಜೂಷ ಗ್ಲಾಸ್ & ಪ್ಲೈವುಡ್ಸ್ ಸಂಸ್ಥೆಯ ಶುಭಾರಂಭ

Suddi Udaya

ಶಿಶಿಲ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಶಿರ್ಲಾಲು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಜಾತ್ರಾ ಸಮಿತಿ ರಚನೆ

Suddi Udaya

ಸೆ.7: ಬರೆಂಗಾಯ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವ

Suddi Udaya
error: Content is protected !!