ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಿತ್ತಬಾಗಿಲು ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರದಲ್ಲಿ ನಡೆಯಿತೊಂದು ಪವಾಡ: ಕಲಶೋತ್ಸವ ಸಂದರ್ಭದಲ್ಲಿ ಮಾಂಗಲ್ಯ ಸರಮಾಲೆ ಕಳೆದುಕೊಂಡ ಮಹಿಳೆಗೆ ಮಂದಿರದ ಆವರಣದಲ್ಲೇ ಸಿಕ್ಕಿತು ಮಾಂಗಲ್ಯ

ಬೆಳ್ತಂಗಡಿ: ಮಿತ್ತಬಾಗಿಲು -ಮಲವಂತಿಗೆ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರ ನಿರ್ಮಾಣ ಪ್ರಾರಂಭದ ಸಂದರ್ಭ ನಾರಾಯಣ ಗುರುಗಳ ಆಶೀರ್ವಾದದಂತೆ ಅತೀ ಕಡಿಮೆ ಅವಧಿಯಲ್ಲಿ ಅಂದರೆ ಕೇವಲ ನಾಲ್ಕು ತಿಂಗಳ ಒಳಗಾಗಿ ಭವ್ಯ ಮಂದಿರದ ಜೊತೆಗೆ ಗುರು ಭವನ ನಿರ್ಮಾಣ ಆಗಿತ್ತು.

ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಲಶಾಭಿಷೇಕದ ದಿನದಂದು ಕಾಜೂರಿನ ಪದ್ಮಾವತಿಯವರ ಲಕ್ಷಾಂತರ ರೂಪಾಯಿ ಮೌಲ್ಯದ ಎರಡು ಪವನ್ ಮಾಂಗಲ್ಯ ಸರಮಾಲೆ ಕಳೆದುಕೊಂಡು ಬಿಟ್ಟಿದ್ದರು, ಹುಡುಕಾಟ ಕೂಡ ಆ ಸಮಯದಲ್ಲಿ ನಡೆಸಲಾಗಿತ್ತು,ಗುರುಗಳ ಮೌಲ್ಯ ಅರಿತ ಅವರು ಏನಾದರೂ ಮಾಂಗಲ್ಯ ಸರಮಾಲೆ ಸಿಕ್ಕಿದರೆ ಗುರುಪೂಜೆ ಇದೇ ಮಂದಿರದಲ್ಲಿ ನಡೆಸುತ್ತೇನೆ ಎಂದು ಹರಕೆ ಹೊತ್ತುಕೊಂಡಿದ್ದರು.

ಹರಕೆ ಹೊತ್ತ ಫಲವೋ, ಅವರ ಪೂರ್ವ ಜನ್ಮದ ಪುಣ್ಯವೋ ಕಲಶೋತ್ಸವ ಕಳೆದು ಒಂದು ತಿಂಗಳ ಒಳಗಾಗಿ ಅವರ ಮಾಂಗಲ್ಯ ಸರಮಾಲೆ ಯಾವುದೇ ರೀತಿಯಲ್ಲಿ ಕಳೆಗುಂದದೆ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರ ಆವರಣದಲ್ಲಿ ಸಿಕ್ಕಿದೆ.ಮಾಂಗಲ್ಯ ಸರಮಾಲೆ ಸಿಕ್ಕಿದ ಸಮಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದ ಸಮಯ ಒಂದೇ ಆಗಿತ್ತು ಎಂದು ಸಂಘದ ಮುಖ್ಯಸ್ಥರಾದ ಸುರೇಂದ್ರ ಕೊಲ್ಲಿ ತಿಳಿಸಿದ್ದಾರೆ.

Related posts

ಬಳಂಜ ಬದಿನಡೆ ನಾಗಬ್ರಹ್ಮ ಕ್ಷೇತ್ರದ ವರ್ಷಾವಧಿ ಜಾತ್ರೋತ್ಸವ ಸಂಪನ್ನ

Suddi Udaya

‘ಗುರುಪೂರ್ಣಿಮೆ’ಯ ಮಹತ್ವ ಹಾಗೂ ಇತಿಹಾಸ

Suddi Udaya

ವಾಣಿ ಕಾಲೇಜಿನಲ್ಲಿ ಕಲಾ ಸಂಘದ ವತಿಯಿಂದ ಉಪನ್ಯಾಸ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಸಿರಿ ಗ್ರಾಮೋದ್ಯೋಗ ಸಂಸ್ಥೆಗೆ ನಟ ರಮೇಶ್ ಅರವಿಂದ್ ಭೇಟಿ: ಪುಷ್ಪಗುಚ್ಚ ನೀಡಿ ಸ್ವಾಗತಿಸಿದ ಸಿರಿ ಸಿಬ್ಬಂದಿಗಳು

Suddi Udaya

ಬೆಳ್ತಂಗಡಿ : ಆಭರಣ ಜ್ಯುವೆಲರಿಗೆ ಐಟಿ ದಾಳಿ ಪ್ರಕರಣ: ಬೆಳ್ತಂಗಡಿ ಆಭರಣ ಶಾಪ್ ನ ಐಟಿ ದಾಳಿ ಮುಕ್ತಾಯ

Suddi Udaya

ಸಿಎಸ್ಇಇಟಿ ಪರೀಕ್ಷೆಯಲ್ಲಿ ಎಕ್ಸೆಲ್ ಅಮೋಘ ಸಾಧನೆ ರಾಜ್ಯಕ್ಕೆ ಮಾದರಿಯಾದ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಫಲಿತಾಂಶ

Suddi Udaya
error: Content is protected !!