ತೋಟತ್ತಾಡಿ: ಶ್ರೀ ಸೋಮನಾಥೇಶ್ವರ ದೇವಸ್ಥಾನ ಬೈಲಂಗಡಿ ತೋಟತ್ತಾಡಿ, ಶ್ರೀ ಸೋಮನಾಥೇಶ್ವರ ಭಜನಾ ಮಂಡಳಿ ಬೈಲಂಗಡಿ ತೋಟತ್ತಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಫೆ 26 ರಂದು ನಡೆಯುವ ಭಜನಾ ವಾರ್ಷಿಕೋತ್ಸವ ಮತ್ತು ಮಹಾಶಿವರಾತ್ರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಿವಾಕರ ಪೂಜಾರಿ ಕಳೆಂಜೊಟ್ಟು ಬಿಡುಗಡೆಗೊಳಿಸಿದರು.
ಭಜನಾ ಮಂಡಳಿ ಅಧ್ಯಕ್ಷ ತುಂಗಯ್ಯ ಗೌಡ ಅಗರಿ, ಕಾರ್ಯದರ್ಶಿ ಸತೀಶ್ ಪೂಜಾರಿ ಮೂರ್ಜೆ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸನತ್ ಕುಮಾರ್ ಮೂರ್ಜೆ, ವಿಜಯ ಗೌಡ ಅಗರಿ, ಚಂದ್ರಶೇಖರ ಗೌಡ ಪರಾರಿ, ದಿನೇಶ್ ನಾಯ್ಕ ಕೋಟೆ, ಬಾಲಕೃಷ್ಣ ಗೌಡ ಪಾದೆ, ಭಜನಾ ಮಂಡಳಿ ಉಪಾಧ್ಯಕ್ಷರುಗಳಾದ ಶ್ರೀನಿವಾಸ ಗೌಡ ಕಲ್ಲರಿಗೆ, ಗುರುವಪ್ಪ ಭಂಡಾರಿ ಅಗರಿ, ಜೊತೆ ಕಾರ್ಯದರ್ಶಿ ಜಯಂತ ಗೌಡ ಪರಾರಿ ದೇವಸ್ಥಾನದ ನೌಕರ ಗಿರೀಶ್ ಆಚಾರ್ಯ ಉಪಸ್ಥಿತರಿದ್ದರು.
ಮೊದಲ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ದಿವಾಕರ ಭಟ್ ಬೈಲಂಗಡಿ ಇವರಿಗೆ ನೀಡಿ ಕಾರ್ಯಕ್ರಮಕ್ಕೆ ಆಮಂತ್ರಿಸಲಾಯಿತು.