April 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ: ಸಾಯಿ ಕುಮಾರ್ ಶೆಟ್ಟಿ ನವಶಕ್ತಿ ಇವರಿಂದ ಕಾಯಾ೯ಲಯದ ಉದ್ಘಾಟನೆ

ಗುರುವಾಯನಕೆರೆ: ಭಕ್ತರ ಪಾಲಿನ ಕಾರಣಿಕ ಕ್ಷೇತ್ರವಾಗಿ, ಅಜಿಲ ಸೀಮೆಯಲ್ಲಿ ಕಲಿಯುಗದ ಕೈಲಾಸವೆಂದೇ ಹೆಗ್ಗಳಿಕೆ ಪಡೆದಿರುವ ಕುವೆಟ್ಟು ಗ್ರಾಮದ ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ ಮತ್ತು ಜಾತ್ರಾ ಮಹೋತ್ಸವವು ಧರ್ಮಸ್ಥಳ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ, ಮಡಂತ್ಯಾರು ವೇ.ಮೂ. ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಫೆ.9ರಿಂದ ಫೆ.13ರ ತನಕ ನಡೆಯಲಿದ್ದು, ಇದರ ಅಂಗವಾಗಿ ಕಾಯಾ೯ಲಯದ ಉದ್ಘಾಟನೆ ಫೆ.7ರಂದು ಜರುಗಿತು.


ಕಾಯಾ೯ಲಯದ ಉದ್ಘಾಟನೆಯನ್ನು ಸಾಯಿ ಕುಮಾರ್ ಶೆಟ್ಟಿ ನವಶಕ್ತಿ ಶಕ್ತಿನಗರ ನೇರವೇರಿಸಿ, ಶುಭ ಹಾರೈಸಿದರು. ರಾಜೇಶ್ ಶೆಟ್ಟಿ ನವಶಕ್ತಿ ಆಗಮಿಸಿ ಶುಭ ಕೋರಿದರು.
ಪೂಜಾ ವಿಧಿಯನ್ನು ಪ್ರಧಾನ ಅಚ೯ಕ ರತ್ನಾಕರ ನೂರಿತ್ತಾಯ ನೇರವೇರಿಸಿದರು.
ಈ ಸಂದರ್ಭದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಸುಖೇಶ್ ಕುಮಾರ್ ಕಡಂಬು, ಪ್ರವೀಣ್ ಕುಮಾರ್ ಅಜ್ರಿ ಪಡ್ಯಾರು ಬೀಡು, ಬ್ರಹ್ಮಕುಂಭಾಭಿಷೇಕ ಸಮಿತಿಯ ಕಾರ್ಯಧ್ಯಕ್ಷ ಸುಮಂತ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಪುರಂದರ ಶೆಟ್ಟಿ, ಪಾಡ್ಯಾರು, ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ, ವಾತ್ಸಲ್ಯ , ಪ್ರಮುಖರಾದ , ಸುನೀಶ್ ಕುಮಾರ್,ಆನಂದ ಶೆಟ್ಟಿ ವಾತ್ಸಲ್ಯ, ಸುಭಾಷ್ ಚಂದ್ರ ಜೈನ್ ಶ್ರೀ ಸ್ವಸ್ತಿಕ್, ಸೀತಾರಾಮ ಶೆಟ್ಟಿ ವೈಭವ್, ರಾಜಪ್ಪ ಶೆಟ್ಟಿ ಸುಧೇಕ್ಕಾರ್, ಗೋಪಿನಾಥ್ ನಾಯಕ್,
ಕಾಯಾ೯ಲಯ‌ ಸಮಿತಿ ಸಂಚಾಲಕ ರಾಮಚಂದ್ರ ಶೆಟ್ಟಿ, ಸಹ ಸಂಚಾಲಕ ವಸಂತ ಗೌಡ ವರಕಬೆ, ಆನಂದ ಕೋಟ್ಯಾನ್, ಸುಧಾಮಣಿ, ಪ್ರಿಯಾ ಹೆಗ್ಡೆ, ಶ್ರೀಮತಿ ಮಂಗಳಾ, ಪ್ರಜ್ವಲ್ ಶೆಟ್ಟಿ ಪಾಡ್ಯಾರು, ನಾರಾಯಣ ಪೂಜಾರಿ ಕಡಂಬು, ಮಧುರಾಜ್ ಹಾಗೂ ವಿತೇಶ್ ಜೈನ್ ಪಡಂಗಡಿ, ರಮಾನಂದ ಸಾಲ್ಯಾನ್, ದಾಮೋದರ್, ತಿಲಕ್ ರಾಜ್, ನಾರಾಯಣ ಆಚಾರ್ಯ ಬರಾಯ, ವಿತೇಶ್ ಬಂಗೇರ, ರವಿ ಚಕ್ಕಿತ್ತಾಯ ಉಪಸ್ಥಿತರಿದ್ದರು.

ನಿತಿನ್ ಬಂಗೇರ ಬರಾಯ ಕಾಯ೯ಕ್ರಮ ನಿರೂಪಿಸಿದರು.

ಫೆ.9: ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆ:
ಫೆ.9ರಂದು ಸಂಜೆ 5ಕ್ಕೆ ನವಶಕ್ತಿ ಕ್ರೀಡಾಂಗಣ ಶಕ್ತಿನಗರದಿಂದ ಶ್ರೀ ಕೊಡಮಣಿತ್ತಾಯ ದೈವಸ್ಥಾನ ಅರಮಲೆಬೆಟ್ಟಕ್ಕೆ ವೈಭವಪೂರ್ಣ ಮೆರವಣಿಗೆಯೊಂದಿಗೆ ಹೊರೆಕಾಣಿಕೆ ಭವ್ಯ ಶೋಭಾಯಾತ್ರೆ ನೆರವೇರಲಿರುವುದು. ಬೆಳಿಗ್ಗೆ 9:೦೦ ರಿಂದ ಮಧ್ಯಾಹ್ನ ಗಂಟೆ 2:೦೦ ರ ತನಕ ಬ್ರಹ್ಮಕುಂಭಾಭಿಷೇಕಕ್ಕೆ ನೀಡುವ ಹೊರೆಕಾಣಿಕೆಯನ್ನು ಪಡಂಗಡಿ – ಶ್ರೀ ಅಯ್ಯಪ್ಪ ಮಂದಿರ, ಪೊಯ್ಯಗುಡ್ಡೆ, ಓಡಿಲ್ನಾಳ – ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮದ್ದಡ್ಕ ಶ್ರೀ ರಾಮ ಭಜನಾ ಮಂದಿರ, ಮದ್ದಡ್ಕ, ಶಕ್ತಿನಗರ- ನವಶಕ್ತಿ ಕ್ರೀಡಾಂಗಣ ಗುರುವಾಯನಕೆರೆ- ಹವ್ಯಕ ಭವನ ಈ ಪ್ರದೇಶಗಳಿಂದ ಸ್ವೀಕರಿಸಲಿದ್ದಾರೆ.
ಫೆ.12ರಂದು ಬೆಳಿಗ್ಗೆ ಗಣಹೋಮ, ಶುಭ ಮುಹೂರ್ತದಲ್ಲಿ ದೈವ ಪ್ರತಿಷ್ಠೆ, ಪ್ರತಿಷ್ಠಾ ಹೋಮ, ಪ್ರತಿಷ್ಠಾ ಕಲಶಾಭಿಷೇಕ, ಪರಿಕಲಶಾಭಿಷೇಕ, ಕುಂಭ ಸಂಕ್ರಮಣದ, ಕುಂಭಲಗ್ನದಲ್ಲಿ ಪ್ರಧಾನ ಕುಂಭಾಭಿಷೇಕ ಪೂಜೆ, ಪಂಚ ಪರ್ವ ಪೂಜೆ, ಧ್ವಜಾರೋಹಣ, ಬಲಿ ಉತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಉತ್ಸವ. ರಾತ್ರಿ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವ ಜರಗಲಿರುವುದು.

Related posts

ನಾಳ ಶ್ರೀ ಕ್ಷೇತ್ರದಲ್ಲಿ ತೆನೆ ವಿತರಣೆ ಹಾಗೂ ಹೊಸ ಅಕ್ಕಿ ಊಟ

Suddi Udaya

ಲಾಯಿಲ: ಕುಂಟಿನಿ ಸ.ಕಿ.ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕರಾಯ: ಹೆರಿಗೆಯ ವೇಳೆ ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವು

Suddi Udaya

ಪುತ್ತೂರಿನ ಸಹಾಯಕ ಆಯುಕ್ತರಾಗಿದ್ದ ಜುಬಿನ್ ಮೊಹಾಪತ್ರ ರವರು ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಹಾಗೂ ಗುರುವಾಯನಕರೆ ನವಶಕ್ತಿ ಮನೆಗೆ ಭೇಟಿ

Suddi Udaya

ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಳೆಂಜದ ನಂದಗೋಕುಲ ಗೋಶಾಲೆಯ ವತಿಯಿಂದ ಅಂಬೇಡ್ಕರ್ ಜಯಂತಿ ಮತ್ತು ವಿಶು ಹಬ್ಬ ಆಚರಣೆ

Suddi Udaya

ಬೆಳಾಲು ಶ್ರೀ ಧ.ಮಂ.ಪ್ರೌ. ಶಾಲೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಕಥೆಗಳಲ್ಲಿ ಜೀವನ ಮೌಲ್ಯ ಉಪನ್ಯಾಸ ಕಾರ್ಯಕ್ರಮ

Suddi Udaya
error: Content is protected !!