ಬೆದ್ರಬೆಟ್ಟು: ಶ್ರೀ ಮಹಮ್ಮಾಯಿ ಮಾರಿಗುಡಿ ಬೆದ್ರಬೆಟ್ಟು ಮಹಮ್ಮಾಯಿ ನಗರ (ಮಾಸ್ತಿಕಲ್ಲು) ಬಂಗಾಡಿ ಇದರ ಪುನರ್‌ಪ್ರತಿಷ್ಠಾ ಮಹೋತ್ಸವ ಹಾಗೂ ದೊಂಪದ ಬಲಿ ಉತ್ಸವವು ಇಂದಬೆಟ್ಟು ಶ್ರೀ ಅನಂತರಾಮ ಉಪಾಧ್ಯಾಯ ಇವರ ಪೌರೋಹಿತ್ಯದಲ್ಲಿ ಫೆ. 6, 7 ಮತ್ತು9 ರಂದು ನಡೆಯಲಿದೆ.
ಫೆ.6 ರಂದು ಬೆಳಿಗ್ಗೆ ಧ್ವಜಾರೋಹಣ, ಕಾರ್ಯಾಲಯ ಉದ್ಘಾಟನೆ, ಅನ್ನಛತ್ರ ಉದ್ಘಾಟನೆ ನಡೆಯಿತು. ಸಂಜೆ ನಡ, ಕನ್ಯಾಡಿ, ನಾವೂರು, ಇಂದಬೆಟ್ಟು , ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ ಗ್ರಾಮಸ್ಥರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ನಂತರ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ವಾಸ್ತು ಪೂಜಾ ಬಲಿ, ರಾಕ್ಷೋಘ್ನ ಹೋಮ ಪ್ರಕಾರ ಬಲಿ, ಅದಿವಾಸ, ಪ್ರಸಾದ ವಿತರಣೆ, ರಾತ್ರಿ ಅನ್ನಸಂತರ್ಪಣೆ ನಡೆಯಿತು.
ಸಂಜೆ ನಡೆದ ಉಗ್ರಾಣ ಉದ್ಘಾಟನೆಯಲ್ಲಿ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪ್ರಮೋದ್ ಕುಮಾರ್ ಬೆದ್ರಬೆಟ್ಟು , ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು, ಹಾಗೂ ಸದಸ್ಯರು, ವಿವಿಧ ಸಮಿತಿಗಳ ಸಂಚಾಲಕರು, ಸಹಸಂಚಾಲಕರು, ಸದಸ್ಯರು, ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹರೀಶ್ ಸಾಲ್ಯಾನ್, ನಾವೂರು ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಗಣೇಶ್ ಗೌಡ, ದಾಸಪ್ಪ ಗೌಡ ಕಾಂಜಾನು ಕೊಲ್ಲಿ, ಪ್ರದೀಪ್ ಕುಮಾರ್ ನಾಗಾಜೆ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.